ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಬಂಗಾರಪೇಟೆ: ತಾಲೂಕಿನ ಹುಲಿಬೆಲೆ ಗ್ರಾಮ ಪಂಚಾಯ್ತಿಯ ಹಲವು ಪ್ರಮುಖರು ಬಿಜೆಪಿ ತೊರೆದು ಮುಂದಿನ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಎನ್. ನಾರಾಯಣಸ್ವಾಮಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.
ಹುಲಿಬೆಲೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಅನ್ಯ ಪಕ್ಷಗಳಿಂದ ಪಕ್ಷ ಸೇರುವ ಸಮಾರಂಭದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಎಸ್.ಎನ್. ನಾರಾಯಣಸ್ವಾಮಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಕೈಗೊಂಡಿರುವ ಹತ್ತಾರು ಜನಪರ ಯೋಜನೆಗಳಿಂದ ಆಕರ್ಷಿತರಾಗಿರುವ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ಇಂದು ಕಾಂಗ್ರೆಸ್ ಸೇರಲು ತಂಡೋಪವಾಗಿ ಬರುತ್ತಿದ್ದಾರೆ. ಇದರಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಶಾಸಕ ಸ್ಥಾನವನ್ನು ಅಲಂಕರಿಸಿ ಮತ್ತೆ ಹಳೇ ಗತ ವೈಭವದ ದಿನಗಳು ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ತಾವು ತಮ್ಮ ಎಸ್.ಎನ್.ಟ್ರಸ್ಟ್ ಮುಖಾಂತರ ಬಡ ಜನರಿಗೆ ಸಹಾಯದ ಹಸ್ತ ಚಾಚುತ್ತಿದ್ದರೆ. ಇದನ್ನು ಸಹಿಸದೆ ಬಿಜೆಪಿ ಮತ್ತು ಜೆಡಿಎಸ್‌ನವರು ರಾಜಕೀಯ ಬಣ್ಣ ಕಟ್ಟಿ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕ್ಷೇತ್ರದ ಜನರಲ್ಲಿ ಕೆಟ್ಟು ಭಾವಣೆ ಬರುವಂತಹ ವಾತಾವರಣ ನಿರ್ಮಾಣದಲ್ಲಿ ತೊಡಗಿದ್ದಾರೆ. ಆದರೆ ಇದಕ್ಕೆಲ್ಲ ಚುನಾವಣೆಯಲ್ಲಿ ಜನರೇ ಪಿತೂರಿಗಾರರಿಗೆ ಉತ್ತರ ನೀಡುವರು ಎಂದು ವಿರೋಧ ಪಕ್ಷಗಳ ಕುತಂತ್ರವನ್ನು ಖಂಡಿಸಿದರು.ತಾಪಂ ಮಾಜಿ ಸದಸ್ಯ ಪಿಚ್ಚಹಳ್ಳಿ ಗೋವಿಂದರಾಜು ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದು ಆ ಪಕ್ಷ ಹಲವು ದಶಕಗಳ ಕಾಲ ತಪಸು ಮಾಡಿ ಅಧಿಕಾರ ಗಳಿಸಿಕೊಂಡಿದೆ ಆದರೆ ಜನರ ವಿಶ್ವಾಸವನ್ನು ಕೇವಲ ಒಂದು ವರ್ಷದಲ್ಲೆ ಮುಖ್ಯಮಂತ್ರಿಯಿಂದ ಹಿಡಿದು ಸಂಪುಟದ ಎಲ್ಲಾ ಸಚಿವರು ಭ್ರಷ್ಟಾಚಾರದಲ್ಲಿ ನಿರತರಾಗುವ ಮೂಲಕ ಕಳೆದುಕೊಂಡಿದೆ. ಇಂತಹ ಕೆಟ್ಟ ಸರ್ಕಾರವನ್ನು ರಾಜ್ಯ ಎಂದೂ ಕಂಡಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸ ತೊಡಗಿದೆ ಬಿಜೆಪಿ ಇನ್ನು ನೆನಪು ಮಾತ್ರ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದರು. ಬ್ಲಾಕ್ ಅಧ್ಯಕ್ಷ ಪಾರ್ಥಸಾರಥಿ, ಮಂಜುನಾಥ್, ಮುಖಂಡರಾದ ಹೊಸರಾಯಪ್ಪ, ನಂಜಪ್ಪ, ಪುರಸಭೆ ಸದಸ್ಯ ಚಂದ್ರಪ್ಪ, ಮುನಿಯಪ್ಪ, ವೀಣಾವೆಂಕಟೇಶ್, ಸುರೇಶ್, ರಾಮಕೃಷ್ಣಪ್ಪ ಮತ್ತಿತರರು ಇದ್ದರು.