ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೇಲು,ಕೀಳು ಭಾವನೆಗಳು ಮತ್ತಷ್ಟು ಹೆಚ್ಚಳ

Mainashree
Updated On : 19 Feb 2013, 10:22 am

ಜಿಲ್ಲಾ ಕಸಾಪ ದತ್ತಿ ಕಾರ್ಯಕ್ರಮದಲ್ಲಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ವಿಷಾದ
ಚಿಕ್ಕಬಳ್ಳಾಪುರ: ಶೋಷಣೆಗೆ ಗುರಿಯಾಗುವವರಲ್ಲಿ ಸಮರ್ಪಕವಾಗಿ ಜಾಗೃತ ಪ್ರಜ್ಞೆ ಮತ್ತು ಶೋಷಣೆ ಮಾಡುವವರಲ್ಲಿ ಪಾಪ ಪ್ರಜ್ಞೆ ಬಂದಾಗ ಶೋಷಣೆ ರಹಿತ ಸಮಾಜ ನಿರ್ಮಾಣವಾಗುತ್ತದೆ ಎಂದು ಕವಿ, ವಿಮರ್ಶಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದಿವಂಗತ ಎನ್. ಕವಿತ ಸ್ಮಾರಕ ದತ್ತಿಯಡಿ ಆಯೋಜಿಸಿದ್ದ ಕುವೆಂಪು, ಬೇಂದ್ರೆ ಸಾಹಿತ್ಯ ಮತ್ತು ಸಮಕಾಲೀನತೆ ವಿಷಯ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾವಿರಾರು ವರ್ಷಗಳಿಂದ ವರ್ಗ ತಾರತಮ್ಯ ನಡೆಯುತ್ತಲೇ ಬಂದಿರುವುದರ ನಡುವೆ ಇಂದು ಸಮಾಜದಲ್ಲಿ ಮೇಲು ಕೀಳು ಭಾವನೆಗಳು ಇನ್ನೂ ಹೆಚ್ಚಾಗುತ್ತಿವೆ. ಶೋಷಿತರಲ್ಲಿ ಸ್ವಲ್ಪ ಮಟ್ಟಿನ ಜಾಗೃತ ಪ್ರಜ್ಞೆ ಬಂದಿದ್ದರೂ ಶೋಷಕ ವರ್ಗ ಮಾತ್ರ ಪಾಪ ಪ್ರಜ್ಞೆಯನ್ನು ಬೆಳಸಿಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕುವೆಂಪುರವರ ವೈಚಾರಿಕತೆ ಹಿನ್ನೆಲೆಯ ಸಾಹಿತ್ಯವನ್ನು ಇಂದಿನ ವಿದ್ಯಾರ್ಥಿಗಳು, ಯುವ ಜನಾಂಗ ಗಂಭೀರವಾಗಿ ಅಧ್ಯಯನ ಮಾಡಬೇಕು, ಆ ಮೂಲಕ ಇಂದಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು. ಸಾಹಿತ್ಯವೂ ಸಮಾಜ ಪರಿವರ್ತನೆಯ ಒಂದು ಭಾಗವಾಗಿದ್ದು, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಬೆಂಗಳೂರಿನ ರೇವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಬಾಬು ಮಾತನಾಡಿ, ರಸಋಷಿ ಕುವೆಂಪು ನವೋದಯ ಪಂಥದಲ್ಲಿ ಸಾಹಿತ್ಯ ರಚನೆ ಮಾಡಿದ್ದರೂ ಅವರ ಕಣತಿಗಳು ಸರ್ವಕಾಲಿಕ. ಸಾಹಿತ್ಯದ ನಾಲ್ಕು ಘಟ್ಟಗಳಲ್ಲೂ ಅವರು ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಾರೆ. ತಮ್ಮ ಕಾವ್ಯ, ನಾಟಕ, ಕಾದಂಬರಿಗಳ ಮೂಲಕ ಸಮಾಜ, ಪ್ರಕೃತಿಯನ್ನು ಯಾವ ರೀತಿ ಸ್ವೀಕರಿಸಬೇಕೆಂಬ ಅರಿವನ್ನು ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಉಪನ್ಯಾಸಕ ಎಂ. ನಾರಾಯಣಸ್ವಾಮಿ ಮಾತನಾಡಿ, ತಮ್ಮ ದೇಸಿ ಶೈಲಿಯಿಂದ ಸಾಹಿತ್ಯ ರಚನೆ ಮಾಡಿದ ದ.ರಾ.ಬೇಂದ್ರೆ ನಾಡು ಕಂಡ ಶ್ರೇಷ್ಠ ಕವಿ. ಸರಳತೆ ಮತ್ತು ಸಮಾಜ ಮುಖಿ ಚಿಂತನೆಗಳಿಂದ ಆಕರ್ಷಿತರಾಗುವ ಬೇಂದ್ರೆ ವರಕವಿಯಾಗಿ ಪ್ರಸಿದ್ಧರಾಗಿದ್ದಾರೆ. ತಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡಾಭಿಮಾನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ರಾಷ್ಟ್ರಪತಿ ಪದಕ ಪುರಸ್ಕಣತ ಜಿಲ್ಲಾ ಕಾರಾಗೃಹ ಅಧೀಕ್ಷಕ ಲಕ್ಷ್ಮಿನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲರಾದ ಧನಮ್ಮ, ನಾರಾಯಣಸ್ವಾಮಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಕವನ, ಸಾಹಿತ್ಯಾಸಕ್ತರಾದ ಜಿ.ಕೆ. ರಮೇಶ್ ಬಾಬು, ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಿ. ವೆಂಕಟರಾಯಪ್ಪ, ಹನುಮಂತರಾವ್, ಬೆಳಗಾವಿಯ  ರಾಣಿ ಚನ್ನಮ್ಮ ವಿವಿಯ ಸಮಾಜ ಶಾಸ್ತ್ರವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಿ.ಕೆ. ಮಂಜುಳಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಅಮೃತ ಕುಮಾರ್, ಕನ್ನಡ ಉಪನ್ಯಾಸಕ ಎನ್. ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement