ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯುವಜನ ಜನಪದ ಸಂಸ್ಕೃತಿ ಉಳಿಸಿ ಬೆಳೆಸಲಿ

Mainashree
Updated On : 19 Feb 2013, 10:21 am

ಗೌರಿಬಿದನೂರು:  ನಮ್ಮ ಪೂರ್ವಿಕರು ನೀಡಿದ ಜನಪದ ಸಂಸ್ಕೃತಿ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಕಾರ್ಯ ಇಂದಿನ ಯುವ ಜನತೆ ಮಾಡಬೇಕಾಗಿದೆ ಎಂದು ಜನಪದ ಸಾಹಿತಿ, ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಇಲ್ಲಿನ ಆಚಾರ್ಯ ಕಾಲೇಜಿನ ಮೈದಾನದಲ್ಲಿ ಜಿಪಂ, ಯುವಜನ ಸೇವೆಗಳು ಹಾಗು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾ ಯುವ ಒಕ್ಕೂಟ, ಗೌರಿಬಿದನೂರಿನ ಜೀವಜಲ ಯುವತಿ ಮಂಡಲಿ ಹಾಗೂ ಗೌತಮ ಬುದ್ಧ ಕಲಾ ಕ್ರೀಡಾ ಸಂಘಗಳ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಆಧುನಿಕತೆಯ ಸೋಗಿನಲ್ಲಿ ನಮ್ಮ ಪರಂಪರೆ ಜಾನಪದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಸಾಂಪ್ರದಾಯಗಳಿಗೂ ಸಂಸ್ಕೃತಿಗೂ ಜನಪದಗಳೇ ಆಧಾರ.  ಇಂದಿನ ಯುವ ಪೀಳಿಗೆ ಇದನ್ನು ಉಳಿಸಿ ರಕ್ಷಿಸ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಸೋಬಾನೆ ಪದಗಳು, ಗೀಗೀಪದ, ಜಾನಪದ, ಚರ್ಮವಾದ್ಯ, ಭಜನೆ, ಕೋಲಾಟ, ಜಾನಪದ ನೃತ್ಯ, ಡೊಳ್ಳು ಕುಣಿತ ವೀರಗಾಸೆ ಮುಂತಾದ ಪ್ರಾಕಾರಗಳಲ್ಲಿ ಯುವಕ, ಯುವತೀಯರು ಪ್ರತಿಭೆ ಪ್ರದರ್ಶಿಸಿದರು.
ಗೊಲ್ಲಹಳ್ಳಿ ಶಿವಪ್ರಸಾದ್, ಗಾನಾ ಅಶ್ವತ್ಥ್, ಕೃಷ್ಣಾರೆಡ್ಡಿ, ಜಯಲಕ್ಷ್ಮಿ, ಶ್ವೇತಾ,  ವಿಶ್ವನಾಥ್, ಸೋಸು ನಾಗೇಂದ್ರ, ನಾಯಕ್, ವೆಂಕಟರಾಂ ಕುಲಕರ್ಣಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement