ಕಟ್ಟೆ ಆಂಜನೇಯ ಬ್ರಹ್ಮರಥೋತ್ಸವ
ಮುಳಬಾಗಲು: ಪಟ್ಟಣದಲ್ಲಿ ಮಧ್ವ ನವಮಿ ಪ್ರಯುಕ್ತ ಪುರಾಣ ಪ್ರಸಿದ್ಧ ಕಟ್ಟಿ ಆಂಜನೇಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀಪಾದರಾಜರ ಮಠದಿಂದ ಶೇಷ ವಸ್ತ್ರಗಳನ್ನು ಅರ್ಪಿಸಿದ ನಂತರ ರಥೋತ್ಸವಕ್ಕೆ ವಿಶೇಷವಾದ ಹೂವಿನ ಅಲಂಕಾರ ಮಾಡಿ ಚಾಲನೆ ನೀಡಲಾಯಿತು. ಬೆಳಿಗ್ಗಿನಿಂದಲೂ ವಿಶೇಷ ಪೂಜೆಗಳು ಹೋಮಾಧಿ ಕಾರ್ಯಕ್ರಮ ನಡೆದವು, ರಂಗವಿಠಲ ಭಕ್ತಿ ಮಂಡಳಿಯವರಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮಗಳು ನಡೆಯಿತು.
ಶ್ರೀಪಾದರಾಜರ ಮಠದ ಜೈರಾಜ್, ವೆಂಕಟೇಶ್, ರಾಘವೇಂದ್ರಸ್ವಾಮಿ ಮಠದ ವಾಸುದೇವ್, ಮುಖ್ಯ ಅರ್ಚಕ ಶೇಷಗಿರಿ. ಕಾಫಿಪುಡಿ ಧನಂಜಯ ಭಾಗವಹಿಸಿದ್ದರು.