ಪ್ರಿಯಕರನ ವಿರುದ್ಧ ಪೊಲೀಸರಿಗೆ ಪ್ರೇಯಸಿ ದೂರು
ಚಿಂತಾಮಣಿ: ಪ್ರೀತಿಸಿ ಕೈಕೊಟ್ಟ ಪ್ರಿಯಕರನ ವಿರುದ್ಧ ಪ್ರೇಯಸಿ ಪೊಲೀಸರಿಗೆ ದೂರು ನೀಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜಲದೇನಹಳ್ಳಿ ಗ್ರಾಮದಿಂದ ವರದಿಯಾಗಿದೆ.
ತಾಲೂಕಿನ ಜಲದೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕಾಲೇಜು ವಿದ್ಯಾರ್ಥಿನಿ ಶೋಭಾ ಎಂಬಾಕೆಯನ್ನು ಒಂದು ವರ್ಷದಿಂದ ಅದೇ ಗ್ರಾಮದ ಬಲಜಿಗ ಸಮುದಾಯಕ್ಕೆ ಸೇರಿದ ಯುವಕ ಚಂದ್ರ ಎಂಬಾತನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚಿಸಿದನೆಂದು ತನ್ನ ಪ್ರಿಯತಮನ ವಿರುದ್ಧ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂದಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.