ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಳಬಾಗಲಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

Lingaraj Badiger
Updated On : 21 Feb 2013, 10:54 am

ಮುಳಬಾಗಲು:  ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಮುಷ್ಕರದ ಮೊದಲ ದಿನವಾದ ಬುಧವಾರ ಪಟ್ಟಣದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಜನ ಸಂಚಾರ ವಿರಳವಾಗಿತ್ತು. ಬೆಳಗಿನಿಂದ ಮಧ್ಯಾಹ್ನದವರೆಗೂ ಜನರಿಲ್ಲದೇ ವಾಹನ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.  ಕೆಲ ಖಾಸಗಿ ಬಸ್‌ಗಳು ತಾಲೂಕಿನ ಹಲವಾರು ಗ್ರಾಮಗಳು ಮತ್ತು ನೆರೆಯ ಆಂಧ್ರಕ್ಕೆ ಸಂಚರಿಸಿದವು. ಅಂಗಡಿ- ಮುಂಗ್ಗಟ್ಟುಗಳವರು ಬೆಳಿಗ್ಗೆ ಮಾತ್ರ ಅಂಗಡಿಗಳನ್ನು ಮುಚ್ಚಿದ್ದರು. ಮಧ್ಯಾಹ್ನದ ವೇಳೆಗೆ ಅವರು ಸಹ ಅಂಗಡಿಗಳನ್ನು ತೆರೆಯಲಾರಂಭಿಸಿದರು. ಸರ್ಕಾರಿ ಕಚೇರಿಗಳ ಬಾಗಿಲು ತೆಗೆದಿದ್ದವಾದರೂ ಜನಸಂದಣೆ ಅತಿ ವಿರಳವಾಗಿತ್ತು. ಬ್ಯಾಂಕ್‌ಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ನಡೆಸಿದ ಮುಷ್ಕರದಲ್ಲಿ ರಾಜ್ಯ ಕಿಸಾನ್  ಸಭಾ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ಜಿಲ್ಲಾ ಸಿಪಿಐ ಕಾರ್ಯದರ್ಶಿ ಪುಣ್ಯಹಳ್ಳಿ ಶಂಕರ್, ಟಿ.ರಾಧಾಕೃಷ್ಣ, ಮಂಜುಳಮ್ಮ, ಈಶ್ವರಮ್ಮ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement