ಶ್ರೀನಿವಾಸಪುರಬೇಕಾಬಿಟ್ಟಿ ಪ್ರತಿಭಟನೆ
ಶ್ರೀನಿವಾಸಪುರ: ಕೇಂದ್ರ ಸರ್ಕಾರವು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದ ಜನವಿರೋಧಿ ನೀತಿ ವಿರುದ್ಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಆಚರಣೆಯಲ್ಲಿ ಸಿಪಿಐ(ಎಂ) ಮುಖಂಡರು ಪ್ರಾಥಮಿಕ ಶಾಲಾ ಮಕ್ಕಳನ್ನು ಸೇರಿಸಿಕೊಂಡು ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ನಡೆಯಿತು.
ಮಕ್ಕಳ ಕೈಯಲ್ಲಿ ಕೆಂಪು ಬಾವುಟ ನೀಡಿದ ಕಾರ್ಯಕರ್ತರು ಪ್ರತಿಭಟನೆ ವೇಳೆ ಬೀದಿ ವ್ಯಾಪಾರಿಗಳು, ಅಂಗಡಿಗಳಲ್ಲಿ ತಿಂಡಿ-ತಿನಿಸುಗಳನ್ನು ಬಲವಂತವಾಗಿ ಪಡೆದು ಸೇವಿಸುವಂತೆಯೂ ಪ್ರೇರೇಪಿಸುತ್ತಿದ್ದುದು ಕಾಟಾಚಾರಕ್ಕೆ ನಡೆಸಿದ ಪ್ರತಿಭಟನೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿನ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ತಳ್ಳುಗಾಡಿಗಳ ಮೇಲಿನ ವ್ಯಾಪಾರಕ್ಕೆ ಬಂದ್ ಬಾಧಿಸಲಿಲ್ಲ.