ಸ್ಥಳೀಯ ಸಂಸ್ಥೆ ಚುನಾವಣೆ ವೆಚ್ಚದ ಲೆಕ್ಕಾಧಿಕಾರಿಗಳ ನೇಮಕ
ಕೋಲಾರ: ಮತದಾನವು ಮುಕ್ತಾಯಗೊಂಡು ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಒಂದು ತಿಂಗಳ ಅವಧಿಯೊಳಗಾಗಿ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣಾ ವೆಚ್ಚ ಮಿತಿ ನಿಯಮಗಳಡಿ ನಿಗದಿಪಡಿಸಿರುವ ನಮೂನೆಯಲ್ಲಿ ಚುನಾವಣೆಗಾಗಿ ಮಾಡಿದ ದೈನಂದಿನ ವೆಚ್ಚ ವಿವರಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸಲು ನೋಡೆಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
ಕೋಲಾರ ನಗರಸಭೆಯ ವಾರ್ಡ್ 1- 10ರವರೆಗೆ: ಪ್ರಕಾಶ್‌ರಾವ್, ಲೆಕ್ಕ ಪರಿಶೋಧಕರು, ತಾ.ಪಂ, ಕೋಲಾರ, ವಾರ್ಡ್ 11 ರಿಂದ 20 ರವರೆಗೆ ಮುತ್ತಪ್ಪ, ಲೆಕ್ಕ ಪರಿಶೋಧಕರು, ಕಾರ್ಯಪಾಲಕ ಅಭಿಯಂತರರ ಕಚೇರಿ, ಲೋಕೋಪಯೋಗಿ ಇಲಾಖೆ, ಕೋಲಾರ. ವಾರ್ಡ್ 21 ರಿಂದ 35 ರವರೆಗೆ ಎನ್.ಎಸ್. ಲೋಕೇಶ್, ಲೆಕ್ಕಾಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿ, ಕೋಲಾರ ಇವರಿಗೆ ಹಂಚಿಕೆ ಮಾಡಲಾಗಿದೆ.
ಮಾಲೂರು ಪುರಸಭೆ: ಬಿ.ಆರ್.ಶ್ರೀಧರ, ಲೆಕ್ಕ ಪರಿಶೋಧಕರು, ಸಹಾಯಕ ನಿಯಂತ್ರಕರ ಕಚೇರಿ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತ್ತುಲ, ಕೋಲಾರ ಇವರಿಗೆ ವಾರ್ಡ್ ಸಂಖ್ಯೆ 1 ರಿಂದ 12ರವರೆಗೆ ಹಂಚಿಕೆ ಮಾಡಲಾಗಿದೆ.
ಎ.ಆರ್. ತಮ್ಮಯ್ಯ, ಲೆಕ್ಕಿಗರು, ಪುರಸಭೆ, ಮಾಲೂರು ಇವರಿಗೆ 13 ರಿಂದ 23 ವರೆಗೆ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಬಂಗಾರಪೇಟೆ ಪುರಸಭೆ: ಗಂಗಪ್ಪ, ಅಕೌಂಟ್ಸ್ ಆಫೀಸರ್, ತಾಪಂ ಬಂಗಾರಪೇಟೆ ಇವರಿಗೆ ವಾರ್ಡ್ 1 ರಿಂದ 12 ರವರೆಗೆ, ಮೊಹಮದ್, ಲೆಕ್ಕ ಪರಿಶೋಧಕರು, ಸಹಾಯಕ ನಿಯಂತ್ರಕರ ಕಚೇರಿ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತ್ತುಲ, ಕೋಲಾರ ಇವರಿಗೆ ವಾರ್ಡ್ 13 ರಿಂದ 23.
ಕೆಜಿಎಫ್ ನಗರಸಭೆ: ಪದ್ಮಾವತಿ, ಅಕೌಂಟ್ ಸೂಪರಿಂಟೆಂಡೆಂಟ್, ನಗರಸಭೆ, ಕೆಜಿಎಫ್ ಇವರಿಗೆ ಹಂಚಿಕೆ ವಾರ್ಡ್‌ಗಳ ಸಂಖ್ಯೆ 1 ರಿಂದ 14 ರವರೆಗೆ, ರಾಜೇಶ್ವರಿ, ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆಜಿಎಫ್ ಇವರಿಗೆ ವಾರ್ಡ್‌ಗಳ ಸಂಖ್ಯೆ 15 ರಿಂದ 28 ವರೆಗೆ ಹಾಗೂ ಕೆ.ಜಿ.ಸವಿತಾ, ಲೆಕ್ಕ ಪರಿಶೋಧಕರು, ಸಹಾಯಕ ನಿಯಂತ್ರಕರ ಕಚೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕೋಲಾರ ಇವರಿಗೆ 29 ರಿಂದ 35 ವಾರ್ಡುಗಳನ್ನು ಹಂಚಿಕೆ ಮಾಡಲಾಗಿದೆ.
ಮುಳಬಾಗಿಲು: ಎಸ್.ಎನ್. ಮಿರ್ಜಾ ಷಬೀ ಹಸನ್, ಎಎಒ ತಾ.ಪಂ. ಮುಳಬಾಗಿಲು ಇವರಿಗೆ ಹಂಚಿಕೆ ವಾರ್ಡ್‌ಗಳ ಸಂಖ್ಯೆ 1 ರಿಂದ 9 ರವರೆಗೆ, ಎಸ್.ಎಂ. ಪಾಪಣ್ಣ, ಪ್ರ.ದ.ಸ (ಲೆಕ್ಕ ಪರಿಶೋಧನೆ), ತಾ.ಪಂ ಮುಳಬಾಗಿಲು ಇವರಿಗೆ 10 ರಿಂದ 19ರವರೆಗೆ ಹಾಗೂ ಬಿ.ಎಲ್. ರಾಮಕೃಷ್ಣಯ್ಯ, ಹಿರಿಯ ಆಡಿಟರ್, ಸಹಕಾರ ಸಂಘಗಳು ಟಿಎಪಿಸಿಎಂಎಸ್ ಕಟ್ಟಡ ಮುಳಬಾಗಿಲು ಇವರಿಗೆ 20ರಿಂದ 27ನೇ ವಾರ್ಡುಗಳನ್ನು ಹಂಚಿಕೆ ಮಾಡಲಾಗಿದೆ.
ಶ್ರೀನಿವಾಸಪುರ: ಮಮತಾ, ಲೆಕ್ಕ ಪರಿಶೋಧಕರು, ಸಹಾಯಕ ನಿಯಂತ್ರಕರ ಕಚೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಕೋಲಾರ ಇವರಿಗೆ 1 ರಿಂದ 12 ರವರೆಗೆ, ವಿ.ಮುನಿವೆಂಕಟಪ್ಪ, ಸಹಾಯಕ ಲೆಕ್ಕಧಿಕಾರಿಗಳು, ತಾ.ಪಂ. ಶ್ರೀನಿವಾಸಪುರ ಇವರಿಗೆ ಹಂಚಿಕೆ ಮಾಡಿರುವ ವಾರ್ಡುಗಳ ಸಂಖ್ಯೆ 13 ರಿಂದ 23 ರವರೆಗೆ ವಾರ್ಡುಗಳಲ್ಲಿನ ಲೆಕ್ಕಗಳ ಮೇಲ್ವಿಚಾರಕರಾಗಿ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಅಭ್ಯರ್ಥಿಗಳು ಸಲ್ಲಿಸುವ ಚುನಾವಣಾ ವೆಚ್ಚದ ವಿವರಗಳನ್ನು ಪರಿಶೀಲಿಸಲು ಅಧಿಕಾರ ನೀಡಲಾಗಿದೆ.