ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ಪುರಸಭೆ: 96 ಮಂದಿ ಉಮೇದುವಾರಿಕೆ

Mainashree
Updated On : 24 Feb 2013, 12:54 pm

ಮಾಲೂರು:  ಪುರಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶನಿವಾರ ವಿವಿಧ ಪಕ್ಷಗಳ 96 ಮಂದಿ ತಮ್ಮ ಉಮೇದಾರಿಕೆ ಸಲ್ಲಿಸಿದ್ದಾರೆ.
ಪಟ್ಟಣದ 23 ವಾರ್ಡ್ಗಾಗಿ ಒಟ್ಟು 187 ಅಕಾಂಕ್ಷಿಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅತಿ ಹೆಚ್ಚು 50 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ನಿಂದ 40, ಜೆಡಿಎಸ್ನಿಂದ 36 ಮಂದಿ ತಮ್ಮ ಅದೃಷ್ಟ ಪರೀಕ್ಷಿಸಲು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂಳ್ಳಿದಂತೆ ಬಿಎಸ್ಆರ್ನಿಂದ 14 ಮಂದಿ, ಜೆಡಿಯುದಿಂದ ಒಬ್ಬರು, ಕೆಜೆಪಿಯಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಸಿಪಿಎಂ ಒಂದು ಹಾಗೂ ಪಕ್ಷೇತರರು 43 ಮಂದಿಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ಪಟ್ಟಣದ ಹದಿನೈದನೇ ವಾರ್ಡ್ಗೆ ಅತಿ ಹೆಚ್ಚು 14 ಮಂದಿ ನಾಮಪತ್ರ ಸಲ್ಲಿಸಿದ್ದರೆ, 16, 18 ವಾರ್ಡ್ಗಾಗಿ ಅತಿ ಕಡಿಮೆ ತಲಾ 4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶನಿವಾರ ಕಾಂಗ್ರೆಸ್ (23) ಹಾಗೂ ಜೆಡಿಎಸ್ (22) ಮಂದಿ ತಮ್ಮ ಬೆಂಬಲಿಗರೊಡನೆ ಬಂದು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಗಳು ಮುಖಂಡ ಮಂಜುನಾಥ್ ಗೌಡ ನೇತೃತ್ವದಲ್ಲಿ ಮಾರಿಕಾಂಭ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪುರಸಭೆಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ, ನಂಜೇಗೌಡ, ಹನುಮಂತಯ್ಯ, ಪಾಪಣ್ಣ, ಲಕ್ಕೂರು ಸುರೇಶ್ ನೇತೃತ್ವದಲ್ಲಿ ಮಂಜು, ಮುರಳೀಧರ್, ಪ್ರದೀಪ್ ರೆಡ್ಡಿ, ಸತ್ಯನ್ ಸೇರಿದಂತೆ ಅನೇಕರು ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ನಿಂದ ಪುರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಚಂದ್ರರೆಡ್ಡಿ, ವಕೀಲ ಆನಂದ್, ವೈ.ನಾರಾಯಣ್ ತಮ್ಮ ನಾಮಪತ್ರ ಸಲ್ಲಿಸಿದ ಪ್ರಮುಖರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement