ಸುಧಾಕರ್ ಬೆಂಬಲಿಗರ ಸ್ವತಂತ್ರ ಸ್ಪರ್ಧೆ (ಸುದ್ದಿ ಸಂಕ್ಷೇಪ )
ಚಿಂತಾಮಣಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಕಡೆಗೂ ಸಿದ್ಧಗೊಂಡ ಸ್ಥಳೀಯ ಶಾಸಕ ಡಾ. ಎಂ.ಸಿ. ಸುಧಾಕರ್ ಈ ಬಾರಿಯೂ ಸಹ ಕಾಂಗ್ರೆಸ್ 'ಬಿ' ಫಾರಂ ವಂಚಿತರಾಗಿದ್ದು, ನಗರಸಭೆಯ ಎಲ್ಲಾ 31 ವಾರ್ಡ್ಗಳಿಗೂ ತಮ್ಮ ಬೆಂಬಲಿಗರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು 'ಬಿ' ಫಾರಂಗಾಗಿ ಕಳೆದ 2 ದಿನಗಳಿಂದ ನಡೆದ ವಿದ್ಯುಮಾನಗಳು ತಲೆಕೆಳಗಾದ ಪರಿಣಾಮ ಕೆ.ಎಚ್. ಮುನಿಯಪ್ಪ ಮೇಲುಗೈನಿಂದ ಈ ಬಾರಿಯೂ ಸಹ ಶಾಸಕ ಎಂ.ಸಿ. ಸುಧಾಕರ್ 'ಬಿ' ಫಾರಂ ಕೈ ತಪ್ಪಿದ ಪರಿಣಾಮ ಕಡೆ ಗಳಿಗೆಯಲ್ಲಿ ವಿಧಿಯಿಲ್ಲದೆ, ನಗರಸಭೆಯ ಎಲ್ಲಾ 31 ವಾರ್ಡ್ಳಿಗೂ ಸ್ವತಂತ್ರವಾಗಿ ತಮ್ಮ ಪರ ಅಭ್ಯರ್ಥಿಗಳನ್ನು ಶಾಸಕ ಎಂ.ಸಿ. ಸುಧಾಕರ್ ಕಣಕ್ಕೆ ಇಳಿಸಿದರು. ಈ ಸಂದರ್ಭ ಶಾಸಕರ ಬೆಂಬಲಿತ ಕಾರ್ಯಕರ್ತರು ಶಾಸಕ ಎಂ.ಸಿ. ಸುಧಾಕರ್ ಭಾವಚಿತ್ರವನ್ನೆ ಬಳಸಿ ಮಾಳಪ್ಪಲ್ಲಿ ಶಾಸಕರ ಸ್ವಗೃಹದಿಂದ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಎಲ್ಲಾ 31 ವಾರ್ಡ್ಳಿಗೂ ಸ್ವತಂತ್ರವಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕಾರು ಗಾಜು ಒಡೆದು
2.10 ಲಕ್ಷ ಕಳವು
ಶಿಡ್ಲಘಟ್ಟ: ಇಲ್ಲಿನ ತಾಲೂಕು ಕಚೇರಿ ಸಮೀಪ ನಿಲ್ಲಿಸಿದ ಕಾರಿನ ಗಾಜುಗಳನ್ನು ಒಡೆದು ಸುಮಾರು 2.10 ಲಕ್ಷ ರು. ಕಳವು ಮಾಡಿರುವ ಘಟನೆ ದಿಬ್ಬೂರಹಳ್ಳಿ ರಸ್ತೆಯಲ್ಲಿ ಶನಿವಾರ ಹಾಡಹಗಲೇ ಸಂಭವಿಸಿದೆ. ತಾಲೂಕಿನ ಎಚ್.ಕ್ರಾಸ್ ನಿವಾಸಿ ರವಿ ಎಂಬವರು ಕಾರಿನಲ್ಲಿ ಹಣ ಇರಿಸಿದ್ದರು. ಘಟನಾ ಸ್ಥಳಕ್ಕೆ ಎ.ಎಸ್.ಪಿ.ರಮೇಶ್ ಬನೂತ್ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು.
ಉದಯಶಂಕರ್ಗೆ ಮಾತೃ ವಿಯೋಗ
ಕೋಲಾರ: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉದಯಶಂಕರ್ ಅವರ ತಾಯಿ ಭಾಗಮ್ಮ ಬಸವರಾಜು (86) ಶುಕ್ರವಾರ ಮಧ್ಯರಾತ್ರಿ ವೇಮಗಲ್ನ ಸ್ವಗೃಹದಲ್ಲಿ ನಿಧನರಾದರು. ಕೋಲಾರ ತಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಭಾಗ್ಯಮ್ಮ ಅವರಿಗೆ ಐವರು ಪುತ್ರರು ಇದ್ದಾರೆ. ಶನಿವಾರ ಸಂಜೆ ವೇಮಗಲ್ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಭಾಗ್ಯಮ್ಮ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.