ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಲಿ
ಬಂಗಾರಪೇಟೆ: ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಾಟೋಚ್ ಸಫೆಟ್ ತಿಳಿಸಿದರು.
ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿರುವ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ ಯಾಂತ್ರಿಕ ಜಗತ್ತಿನಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದೆ, ಸಾಮಾಜಿಕ ನಿಯಂತ್ರಣ ಕೂಡ ಕ್ಷೀಣಿಸುತ್ತಿದೆ ಇದರ ಪರಿಣಾಮ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ತಡೆಗಟ್ಟುವಲ್ಲಿ ಜನರು ಪೊಲೀಸರೊಂದಿಗೆ ಕೈ ಜೋಡಿಸಬೇಕೆಂದು ಕೋರಿದರು.
ತಾರುಣ್ಯ ವ್ಯವಸ್ಥೆ ಮಕ್ಕಳು ಹೆಚ್ಚಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಂಡು ಬಂದಿದೆ ಹಿರಿಯರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು, ಮಕ್ಕಳಿಗೆ ವಿವಿಧ ಜವಾಬ್ದಾರಿಯನ್ನು ವಹಿಸಬೇಕು,ಪೋಷಕರು ತಮ್ಮ ಮಕ್ಕಳೊಂದಿಗೆ ಕನಿಷ್ಠ ಕೆಲ ಗಂಟೆಗಳಕಾಲ ಕಾಲಹರಣ ಮಾಡಬೇಕು, ತಮ್ಮ ಹಿತ ಅನುಭವಗಳನ್ನು ಹಂಚಿಕೊಳ್ಳಬೇಕು, ಸಮಾಜ ಅಭಿವೃದ್ಧಿಗೆ ಪೂಕರವಾದ ನಡವಳಿಕೆಗಳನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಸಲಹೆ ನೀಡಿದರು. ಕೆಲ ಗ್ರಾಮಸ್ಥರು ಮಾತನಾಡಿ ಇಂತಹ ಸಂಪರ್ಕ ಸಭೆಗಳನ್ನು ತಿಂಗಳಿಗೊಮ್ಮೆ ಹಮ್ಮಿಕೊಳ್ಳುಬೇಕೆಂದು ಕೋರಿದರು.
ಸಭೆಯಲ್ಲಿ ಜಿಪಂ ಸದಸ್ಯೆ ಸಿಮೋಲ್, ದೋಣಿಮಗಡು ಪಂಚಾಯ್ತಿ ಅಧ್ಯಕ್ಷರಾದ ಸುಲೋಚನಮ್ಮ, ಕಾಮಸಮುದ್ರ ಅಧ್ಯಕ್ಷ ಗೌರಮ್ಮ, ಮುಖಂಡರಾದ ನಾರಾಯಣಪ್ಪ, ಮೋಹನ್‌ಮೂರ್ತಿ, ಎಸ್‌ಐ ರಾಘವೇಂದ್ರಪ್ರಕಾಶ್ ಇದ್ದರು.
---