ಬಿಇಒ ವರ್ಗ: ಖಂಡನೆ
ಮಾಲೂರು: ಸ್ಥಳೀಯ ಶಿಕ್ಷಣಾಧಿಕಾರಿ ವೆಂಕಟರಾಮ ರೆಡ್ಡಿ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ತೀವ್ರವಾಗಿ ಖಂಡಿಸಿದೆ. ಸಂಘದ ಅಧ್ಯಕ್ಷ ಎಂ. ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಕ್ಷ ಅಧಿಕಾರಿ ಬಿಇಓ ವರ್ಗಾವಣೆಯನ್ನು ಸರ್ವಾನುಮತದಿಂದ ಖಂಡಿಸಿದ ಶಿಕ್ಷಕರು ಶಿಕ್ಷಕ ವರ್ಗದಲ್ಲಿ, ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡುತ್ತಿದ್ದ ವೆಂಕಟರಾಮ ರೆಡ್ಡಿ ಅವರನ್ನು ಜನಪ್ರತಿನಿಧಿಗಳು ವರ್ಗಾವಣೆ ಮಾಡುವ ಹುನ್ನಾರಕ್ಕೆ ಕೈ ಹಾಕಬಾರದಿತ್ತು. ಸದರಿ ವರ್ಗಾವಣೆ ರದ್ದು ಪಡಿಸುವಂತೆ ಒತ್ತಾಯಿಸಲು ಶಾಸಕರ ಬಳಿ ಹೋಗಲು ನಿಯೋಗವನ್ನು ಕಂಡೊಯ್ಯಲು ಸಭೆ ತೀರ್ಮಾನಿಸಿತ್ತು.ಒಂದು ವೇಳೆ ವರ್ಗಾವಣೆ ರದ್ದಗಾದಿದ್ದರೆ ಒಂದು ಸಾಂಕೇತಿಕ ಧರಣಿ ನಡೆಸಲು ಶಿಕ್ಷಕರ ಪದಾಧಿಕಾರಿಗಳ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು. ಟಿ.ಕೆ. ಅಶ್ವಥ್ ನಾರಾಯಣಗೌಡ, ಸೂರ್ಯನಾರಾಯಣ ರಾವ್, ಬಹದ್ದೂರ್ ಸಾಬ್, ನರಸಿಂಹ, ವಿಜಯಕುಮಾರ್, ಟಿ.ಎ. ರಾಮಪ್ಪ, ನಟರಾಜ್, ಎಂ.ಜೆ. ನಾಗರಾಜ್, ಸಂಜೀವಪ್ಪ, ಮಂಜುಳಾ ದೇವಿ, ಪ್ರೇಮಾ ಕುಮಾರಿ ಇದ್ದರು.