ಆಂಜಿನಪ್ಪ ನಾಮಪತ್ರ ವಾಪಸ್
ಮಾಲೂರು: ಇಲ್ಲಿನ ವಾರ್ಡ್ ನಂ.7 ರಲ್ಲಿ ಹಾಲಿ ಬಿಜೆಪಿ ಸದಸ್ಯ ಆಂಜಿನಪ್ಪ ಹಾಗೂ ಬಿಜೆಪಿಯ ಬಿ ಫಾರಂ ಪಡೆದಿದ್ದ ಸೋಮಶೇಖರ್ ನಾಮಪತ್ರ ವಾಪಸ್ಸು ಪಡೆಯಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಅಭ್ಯರ್ಥಿಗಳ ಮನವೊಲಿಸಲು ಮದ್ದೂರಮ್ಮನ ಎದುರು ಲಾಟರಿ ಮೊರೆ ಹೋದರು. ದೇವಾಲಯದಲ್ಲಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಚೀಟಿ ಹಾಕಲಾಯಿತು. ಅದರಲ್ಲಿ ಸೋಮಶೇಖರ್ ಹೆಸರು ಬಂದದ್ದರಿಂದ ಹಾಲಿ ಸದಸ್ಯ ಆಂಜಿನಪ್ಪ ತಮ್ಮ ನಾಮಪತ್ರ ವಾಪಸ್ಸು ತೆಗೆದುಕೊಂಡರು. ಮತ್ತೊಂದೆಡೆ ವಾರ್ಡ್ ನಂ.10 ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕಿನ್ ಶ್ರೀನಿವಾಸ್ರವರು ಮುಖಂಡರ ಬಿಜೆಪಿಯೊಂದಿಗಿನ ಮೈತ್ರಿ ಪ್ರತಿಭಟಿಸಿ ತಮ್ಮ ನಾಮಪತ್ರ ವಾಪಸ್ಸು ಪಡೆದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.