ನವ ವಿವಾಹಿತೆ ನೇಣಿಗೆ ಶರಣು
ಚಿಕ್ಕಬಳ್ಳಾಪುರ: ಕೆಲ ವಾರಗಳ ಹಿಂದೆ ಪೊಲೀಸರ ಪೌರೋಹಿತ್ಯದಲ್ಲಿ ಪ್ರೀತಿಸಿದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಗೃಹಿಣಿಯೊಬ್ಬಳು, ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ಸಂಭವಿಸಿದೆ. ಅನುಮಾನ ಮೂಡಿಸಿರುವ ಪ್ರಕರಣದ ಹಿಂದಿನ ಸತ್ಯಾಂಶ ತಿಳಿಯಲು ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿಯ ತ್ರಿವೇಣಿ. ದೊಡ್ಡಕಿರುಗೂರು ಗ್ರಾಮದ ಮಂಜುನಾಥ್ ನಡುವೆ ಪ್ರೇಮಾಂಕುರವಾಗಿತ್ತು. ಇದು ಎರಡೂ ಮನೆಯವರಿಗೂ ಗೊತ್ತಾಗಿ ದೊಡ್ಡ ಗಲಾಟೆಯಾಗಿತ್ತು. ಗ್ರಾಮಸ್ಥರು ಪಂಚಾಯಿತಿ ಸಹ ನಡೆಸಿದ್ದರು. ಈ ನಡುವೆ ಮಂಜುನಾಥ್ ನಾಪತ್ತೆಯಾದ್ದರಿಂದ ತ್ರಿವೇಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಪೊಲೀಸರು ಮಂಜುನಾಥ್ನನ್ನು ಪತ್ತೆ ಹಚ್ಚಿದ್ದರು. ಹುಡುಗನ ಕಡೆಯವರ ವಿರೋಧದ ನಡುವೆಯೂಪೊಲೀಸರು ಪ್ರೇಮಿಗಳ ಮದುವೆ ಮಾಡಿಸಿದ್ದು, ನೂತನ ದಂಪತಿ ತಾಲೂಕಿನ ಜಡೇನಹಳ್ಳಿಯಲ್ಲಿ ವಾಸವಾಗಿದ್ದರು. ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ಬಂದು ಮನೆ ಬಾಗಿಲು ಬಡಿದಾಗ ಯಾರು ತೆಗೆದಿಲ್ಲ.ಒಳಗೆ ಇಣುಕಿ ನೋಡಿದಾಗ ತ್ರಿವೇಣಿ ನೇಣು ಹಾಕಿಕೊಂಡಿರುವುದು ಕಾಣಿಸಿದೆ. ಮಂಜುನಾಥ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.