ಸೀಮೆಎಣ್ಣೆ ಅಕ್ರಮ ಸಾಗಣೆ: ಮೂವರ ಬಂಧನ
ಶಿಡ್ಲಘಟ್ಟ: ಅಕ್ರಮವಾಗಿ ಸೀಮೆಎಣ್ಣೆ ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಪೋಲಿಸರು ಮೂವರನ್ನು ಬಂಧಿಸಿರುವ ಘಟನೆ ತಾಲೂಕಿನ ಹಂಡಿಗನಾಳದಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ಸಂಪತ್ ಕುಮಾರ್, ಬಾಲಕೃಷ್ಣ ಹಾಗೂ ಶಿಡ್ಲಘಟ್ಟದ ಕೆ.ಕೆ.ಪೇಟೆ ನಿವಾಸಿ ಬಾಬು ಬಂಧಿತರು.
ತಾಲೂಕಿನ ಹಂಡಿಗನಾಳ ಮಾರ್ಗವಾಗಿ ದೇವನಹಳ್ಳಿಗೆ ಸೀಮೆಎಣ್ಣೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಪಿಎಸ್ಐ ಪಿ.ಬಿ.ಹನುಮಂತಪ್ಪ ಹಾಗೂ ತಂಡ ದಾಳಿ ನಡೆಸಿ, ಸುಮಾರು 525 ಲೀ. ಸೀಮೆಎಣ್ಣೆ, ಹಾಗೂ ಕ್ವಾಲೀಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.