ಅತ್ಯುತ್ತಮ ಆಡಳಿತ ಮಾಸಾಚರಣೆ
ಮುಳಬಾಗಲು: ಹೋಬಳಿ ಮುಖ್ಯ ಕೇಂದ್ರಗಳಾದ ನಾಡ ಕಚೇರಿಗಳಲ್ಲಿ ಕಂದಾಯ ಇಲಾಖೆಯ ಎಲ್ಲಾ 36 ಸೇವೆಗಳು ಲಭ್ಯವಾಗಿದ್ದು, ಇದರ ಸದುಪಯೋಗ ಪಡೆಯಲು ತಹಸೀಲ್ದಾರ್ ಎಂ.ನಂಜಯ್ಯ ಹೇಳಿದರು.
ತಾಲೂಕಿನ ತಾಯಲೂರು ಗ್ರಾಮದ ಸಮುದಾಯ ಭವನದಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಅತ್ಯುತ್ತಮ ಆಡಳಿತ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇನ್ನು ಮುಂದೆ ರೈತರು ಹಾಗೂ ಸಾರ್ವಜನಿಕರು ತಮ್ಮ ಕಂದಾಯ ಇಲಾಖೆಯ ಕೆಲಸಗಳಿಗೆ ತಾಲೂಕು ಕಚೇರಿಗಳಿಗೆ ಅಲಿಯಬೇಕಾಗಿರುವುದಿಲ್ಲ. ಪ್ರತಿ ಕೆಲಸವೂ ನಾಡ ಕಚೇರಿಯಲ್ಲಿಯೇ ಸಾಧ್ಯವಾಗುವುದೆಂದರು. ಬರಗಾಲದ ಕಾರಣ ಸರ್ಕಾರ ಸಣ್ಣ ರೈತರಿಗೆ ನೀಡಿರುವ ಒಂದು ಸಾವಿರ ರುಪಾಯಿಗಳವರೆಗಿನ ಹಣವನ್ನು ಚೆಕ್ ಮೂಲಕವಾಗಿ ವಿತರಿಸಲಾಗುತ್ತಿದೆ ಎಂದರು.
ಅಪರ ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ಕಂದಾಯ ಇಲಾಖೆಯ 36 ಯೋಜನೆಗಳನ್ನು ವಿವರಿಸಿದರು. ತಾಯಲೂರು ಗ್ರಾಪಂ ಅಧ್ಯಕ್ಷ ಎಟಿಎಂ ಗೌಡ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ತೇಜೋರಮಣ ಮೂರ್ತಿ, ಸದಸ್ಯರಾದ ವಿ.ರಂಗಸ್ವಾಮಿ, ಉಪ ತಹಸೀಲ್ದಾರ್ ಆನಂದ್, ಆಹಾರ ಇಲಾಖೆಯ ಚನ್ನಯ್ಯ, ರಾಜಸ್ವ ನಿರೀಕ್ಷಕ ಬೈರಕೂರು ರೆಡ್ಡಪ್ಪ ಗುಪ್ತ, ಉಮೇಶ್, ಸುಧಾಕರ್. ನರೇಶ್, ಸುಬ್ರಹ್ಮಣಿ, ಹನುಮಂತು, ರವಿಕುಮಾರ್, ಸುರೇಶ್ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.