ಆದಿಶ್ರೀಗೆ ಶ್ರದ್ಧಾಂಜಲಿ
ಬಾಗೇಪಲ್ಲಿ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರಿಗೆ ತಾಲೂಕಿನ ಹೋಬಳಿ ಕೇಂದ್ರ ಮಿಟ್ಟೇಮರಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ಮತ್ತು ಒಕ್ಕಲಿಗ ಸಮುದಾಯದವರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಶ್ರದ್ಧಾಂಜಲಿ ಸಭೆಯನ್ನು ಜಿಪಂ ಮಾಜಿ ಸದಸ್ಯ ಬಿ.ವಿ. ರಾಮರೆಡ್ಡಿ ಉದ್ಘಾಟಿಸಿ ಮಾತನಾಡಿದರು. ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರು ನಾಡಿಗೆ ಸಲ್ಲಿಸಿದ ಸೇವೆ ಅನನ್ಯ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ತಮ್ಮ ಶ್ರಮದಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರವನ್ನು ಅತ್ಯಂತ ಶ್ರೀಮಂತಗೊಳಿಸಿದರು. ವಿಶೇಷವಾಗಿ ಅವರು ಹಸಿರನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಆಂದೋಲನ ಅತ್ಯಂತ ಪ್ರಶಂಸನೀಯ ಎಂದು ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಎಸ್. ಚೌಡರೆಡ್ಡಿ ಮಾತನಾಡಿ, ದೇಶದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮಠಗಳು ಮತ್ತು ಸ್ವಾಮೀಜಿಯವರ ಪಾತ್ರ ಅಪಾರ. ಹಿಂದೂ ಸಂಸ್ಕೃತಿ ಉಳಿಸಲು ಮಠಗಳು ನೀಡುತ್ತಿರುವ ಕೊಡುಗೆಯಿಂದಾಗಿ ದೇಶ ವಿಶ್ವದಲ್ಲಿಯೇ ಎಲ್ಲರೂ ಮೆಚ್ಚುವ ಸ್ಥಿತಿ ತಲುಪಿದೆ. ಸಮಾಜದ ಅಭಿವೃದ್ಧಿಗೆ ಸಾಧು- ಸಂತರ ಮತ್ತು ಸ್ವಾಮೀಜಿಗಳು ಪಾತ್ರ ಅಪಾರ ಎಂದರು.
ಮುಖಂಡರಾದ ಅಶ್ವತ್ಥರೆಡ್ಡಿ, ಎಸ್. ಬೈರೆಡ್ಡಿ, ರೆಡ್ಡಪ್ಪ, ವಿಜಿ, ಮಂಜುನಾಥ್, ರಾಮರೆಡ್ಡಿ, ನಾಗರಾಜ್, ಶ್ರೀನಿವಾಸ್, ಶ್ರೀರಾಮರೆಡ್ಡಿ, ಪಾಪಿರೆಡ್ಡಿ, ಸೊಣ್ಣಪ್ಪ, ಬೈರೆಡ್ಡಿ, ನಾಗಮಲ್ಲರೆಡ್ಡಿ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.