ಕಾಡಾನೆ ದಾಳಿಗೆ ರೈತ ಬಲಿ
ಬಂಗಾರಪೇಟೆ: ತಮಿಳುನಾಡಿನಿಂದ ಕಾಮಸಮುದ್ರ ಹೋಬಳಿ ಅರಣ್ಯ ಪ್ರದೇಶಕ್ಕೆ ವಲಸೆ ಬಂದಿರುವ ಕಾಡಾನೆಗಳ ಹಿಂಡು ಇಲ್ಲಿನ ರೈತನೊಬ್ಬನನ್ನು ಭಾನುವಾರ ಬಲಿ ತೆಗೆದುಕೊಂಡಿದೆ. ಜತೆಗೆ ಘಟನೆಯಲ್ಲಿ ನಾಲ್ವರು ರೈತರು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶಕ್ಕೆ ಸೇರಿದ ಗುಡಿಪಲ್ಲಿ ಗ್ರಾಮದ ಕುರಿ ಕಾಯುತ್ತಿದ್ದ ವೆಂಕಟೇಶಪ್ಪ (55) ಆನೆ ದಾಳಿಗೆ ಬಲಿಯಾದ ರೈತ. ಅದೇ ರೀತಿ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆಗಳನ್ನು ಗಜಪಡೆ ನಾಶ ಮಾಡಿವೆ. ಹೊಲಗಳಿಗೆ ನುಗ್ಗಿದ ಆನೆಗಳನ್ನು ಹಿಮ್ಮೆಟ್ಟಿಸಲು ಮುಂದಾದಾಗ ಆನೆಗಳು ರೈತರನ್ನು ಬೆನ್ನಟ್ಟಿವೆ. ಈ ವೇಳೆ ವೆಂಕಟೇಶಪ್ಪ ಓಡಲಾಗದೆ ಆನೆ ದಾಳಿಗೆ ಬಲಿಯಾದರೆ, ಉಳಿದ ನಾಲ್ವರು ರೈತರು ಗಾಯಗೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.