ಚಿಂತಾಮಣಿಯಲ್ಲಿ ಜಮೀನು ಜಗಳ: ಗುಂಪು ಘರ್ಷಣೆ
ಚಿಂತಾಮಣಿ: ಜಮೀನುವೊಂದಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದ ಪರಿಣಾಮ ಒಂದು ಕಡೆಯ ಗುಂಪು ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ನಗರಠಾಣೆಯ ಮುಂದೆ ಧರಣಿ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಎನ್.ಎನ್.ಟಿ ವೃತ್ತದ ಬಳಿ ಇರುವ ಮಟ್ಕಾ ದಂಧೆಯ ರುವಾರಿ ಅಲ್ಲು ಹಾಗೂ ಈತನ ಸಹಚರ ಸೈಯದ್ ಸುನ್ನಿಲ್ಲಾ ಪಾಷ ಎಂಬ ಇಬ್ಬರು ಜೊತೆ ಸೇರಿ ಕಳೆದ ಒಂದು ವರ್ಷದಿಂದ ತಾಲೂಕಿನ ವ್ಯಾಪ್ತಿಯಲ್ಲಿ ಮಟ್ಕಾ ದಂದೆಯಲ್ಲಿ ತೊಡಗಿ ಲಕ್ಷಾಂತರ ರು. ಕೂಲಿ ಕಾರ್ಮಿಕ, ಬಡ ಬಗ್ಗರಿಂದ ಈ ದಂಧೆಗೆ ಸಿಲುಕಿದ ಮುಗ್ಧ ಜನತೆಯಿಂದ ಹಣ ಲೂಟಿ ಮಾಡಿ ಬಂದಂತಹ ಹಣದಲ್ಲಿ ಜಮೀನೊಂದನ್ನು ಖರೀದಿಸಿದ ವಿಷಯವಾಗಿ ಇಬ್ಬರ ನಡುವೆ ಕಳೆದ ಹಲವು ದಿನಗಳ ಹಿಂದೆ ಮಾತಿನ ಸಮರವೇ ನಡೆದಿತ್ತು ಎಂದು ಹೇಳಲಾಗಿದೆ. ಭಾನುವಾರ ಮಧ್ಯಾಹ್ನ ನಾಗನಾಥೇಶ್ವರ ವೃತ್ತದ ಬಳಿ ಅಲ್ಲು ಮತ್ತು ಸೈಯದ್ ಸುನ್ನಿಲ್ಲಾ ಪಾಷ ಇಬ್ಬರಿಗೂ ಪರಸ್ಪರ ವಾಗ್ವಾದಕ್ಕಿಳಿದ ಪರಿಣಾಮ ಪರಿಸ್ಥಿತಿ ಕೈಮೀರಿ ಮಾರಾಮಾರಿ ನಡೆಯಿತು. ಈ ಸುದ್ದಿ ತಿಳಿದ ಎರಡೂ ಕಡೆಯ ಗುಂಪುಗಳು ಮಾರಕಾಸ್ತ್ರಗಳು ಹಿಡಿದು ಮಾರಮಾರಿ ನಡೆಸಿದ ಪರಿಣಾಮ ಹಲವರಿಗೆ ಗಾಯಗಳಾಗಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.