ಬನಹಳ್ಳಿ ಶಾಲೆಯಲ್ಲಿ 64ನೇ ಗಣರಾಜ್ಯೋತ್ಸವ
ಟೇಕಲ್: ಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 64ನೇ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಬನಹಳ್ಳಿ ಸಂಕೀರ್ಣ ವ್ಯಾಪ್ತಿಯ 15 ಶಾಲೆಗಳಿಗೆ ಸ್ಥಳಿಯ ಗ್ರಾ.ಪಂ. ಅಧ್ಯಕ್ಷ ರಾಮಕೃಷ್ಣಪ್ಪನವರು 15 ಗೋಡೆ ಗಡಿಯಾರಗಳನ್ನು ಉಚಿತವಾಗಿ ನೀಡಿದರು. ಹಾಗೂ ಇದೇ ದಿನ ಶಾಲೆಯಲ್ಲಿ ಬಿಸಿ ಊಟದಡಿ ಬಿಸಿ ರಾಗಿಮುದ್ದೆ ಸಾರನ್ನು ಮಕ್ಕಳಿಗೆ ನೀಡುವುದರ ಮೂಲಕ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ರಾಮಕೃಷ್ಣಪ್ಪನವರು ಮಾತನಾಡಿ ಶಿಕ್ಷಣ ಇಲಾಖೆಯ ಸಂಕೀರ್ಣ ಮಟ್ಟದಲ್ಲಿ ನಾನು ಅಧ್ಯಕ್ಷನಾದ ದಿನದಿಂದಲೂ ಬಹಳ ರೀತಿಯಾಗಿ ನನ್ನ ಕೈಲಾದ ಅಳಿಲುಸೇವೆಯನ್ನು ಮಾಡುತ್ತಿದ್ದೇನೆ ಎಂದರು. ಬನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಸಂಜೀವಪ್ಪ ದ್ವಜಾರೂಹಣ ನೆರವೇರಿಸಿದರು. ಹಾಗೂ ಮಾಜಿ ದರಕಾಸ್ತು ಸಮಿತಿಯ ಅಧ್ಯಕ್ಷ ಬಿ.ಜಿ. ಮುನಿಶಾಮಿಗೌಡ, ಎ.ಪಿ.ಎಂ.ಸಿ ಸದಸ್ಯ ಚಾನ್ ಪಾಷ, ಗ್ರಾ.ಪಂ. ಉಪಾದ್ಯಕ್ಷ ನಂಜಪ್ಪ, ಸಂಕೀರ್ಣದ ಸಿ.ಆರ್.ಪಿ ಆರ್.ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತ್ತು.
ಸಭೆಯಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಪುಟ್ಟಚಾರಿ, ಪಾಚಾಸಾಬಿ, ಗ್ರಾಮದ ಮುಖಂಡ ಸೊಣ್ಣಮುನಿಯಪ್ಪ, ಕಣಗಲ ಗ್ರಾ.ಪಂ.ಸದಸ್ಯ ಸಂಜೀವ ಚಿನ್ನಪ್ಪ, ಕ್ಷೇತ್ರನಹಳ್ಳಿ ಗೋಪಾಲಪ್ಪ, ಕಣಗಲ ಗ್ರಾಮದ ಮುಖಂಡರಾದ ಕೆ. ನಾಗರಾಜ್, ಪಾಪಣ್ಣ, ಈಶ್ವರ್, ಮುನಿಯಪ್ಪ, ಮಾಕಾರಹಳ್ಳಿಯ ಮಂಜು, ಮತ್ತು ಶಿಕ್ಷಕರಾದ ಶಿವಶಂಕರ್, ಶಶಿಧರ್, ಪ್ರಸನ್ನಕುಮಾರ್, ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಮ್. ವಿಜಯಕುಮಾರ್ ಪ್ರಾಸ್ತಾವಿಕ ನುಡಿ ನುಡಿದು ವಂದಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.