'ಆಧಾರ್' ಅವಾಂತರ ತಪ್ಪಿಸಲು ಒತ್ತಾಯ
ಕೋಲಾರ: ಆಧಾರ್ ಕಾರ್ಡು ಪಡೆಯುವುದು ಶ್ರೀಸಾಮಾನ್ಯನ ಅಧಿಕಾರ ಎಂದು ಕೇಂದ್ರ ಸರ್ಕಾರದವರು ಜಾರಿಗೆ ತಂದಿರುವ ವಿನೂತನ ಗುರುತಿನ ಚೀಟಿ ಪಡೆಯುವುದಕ್ಕೆ ಜನತೆ ಅನೇಕ ಸಮಸ್ಯೆ ಎದುರಿಸುತ್ತಿರುವುದರಿಂದ ಜಿಲ್ಲಾಡಳಿತ ಕೂಡಲೇ ಪ್ರತಿ ವಾರ್ಡಿನಲ್ಲಿ ಆಧಾರ್ ಕಾರ್ಡುಗಳ ವಿತರಣಾ ಕೇಂದ್ರ ತೆರೆಯಬೇಕೆಂದು ಯುವ ಮುಖಂಡ ಕಠಾರಿಪಾಳ್ಯದ ಏಕಲವ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗ ಆಧಾರ್ ಕಾರ್ಡು ವಿತರಣೆಗಾಗಿ ನಡೆಯುತ್ತಿರುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಅವಾಂತರಗಳು ಕಂಡು ಬಂದಿದೆ. ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡು ಪಡೆಯಲು ನಾಗರಿಕರು ಗಂಟೆಗಟ್ಟಲೆ ಕಾಯಬೇಕಾಗಿರುವುದರಿಂದ ತೊಂದರೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ನಾಗರಿಕರ ಅನುಕೂಲಕ್ಕಾಗಿ ನಗರದ ಪ್ರತಿ ವಾರ್ಡ್ಗೊಂದರಂತೆ ಒಂದು ಕೇಂದ್ರ ತೆರೆದರೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.