ಕಲ್ಲು ತುಂಬಿದ ಲಾರಿ ಮುಗುಚಿ ವ್ಯಕ್ತಿ ಸಾವು
ಕೋಲಾರ: ಕಲ್ಲು ತುಂಬಿದ ಲಾರಿ ಮಗುಚಿ ಒಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-4ರ ಚಾಕಾರಸನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತನನ್ನು ಬೆಂಗಳೂರು ನಗರದ ಚಿಕ್ಕಬಸವನಪುರ ವಾಸಿ ಗಣೇಶ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿ ಬೆಂಗಳೂರಿನ ಸಹಕಾರ ನಗರದ ವಾಸಿ ಕೃಷ್ಣಪ್ಪ ಎನ್ನಲಾಗಿದೆ. ಕಲ್ಲು ತುಂಬಿದ್ದ ಟಿಪ್ಪರ್ ರಾಷ್ಟ್ರೀಯ ಹೆದ್ದಾರಿ-4ರ ಚಾಕಾರಸನಹಳ್ಳಿ ಗೇಟ್ ಬಳಿ ಹೋಗುತ್ತಿದ್ದ ಸಮಯದಲ್ಲಿ ಲಾರಿ ರಸ್ತೆ ಬದಿಯಲ್ಲಿ ಉರುಳಿದ ಪರಿಣಾಮ ಘಟನೆ ಸಂಭವಿಸಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಗಣೇಶ ಮತ್ತು ಕೃಷ್ಣಪ್ಪ ತೀವ್ರವಾಗಿ ಗಾಯಗೊಂಡಿದ್ದರು.
ಗಾಯಳಗಳನ್ನು ಚಿಕಿತ್ಸೆಗಾಗಿ ಕೋಲಾರಕ್ಕೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯ ಗಣೇಶ ಮೃತಪಟ್ಟಿದ್ದು, ಕೃಷ್ಣಪ್ಪ ಅವರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.