ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಭದ್ರತೆಯತ್ತ ದೇಶದ ಯುವಜನತೆ: ವಿಷಾದ

Vishwanath S
Updated On : 2 Jul 2013, 1:00 am

ಕ.ಪ್ರ. ವಾರ್ತೆ ,  ಚಿಕ್ಕಬಳ್ಳಾಪುರ ,  ಜು.1
ದೇಶದಲ್ಲಿ ದಿನೇ ದಿನೇ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಹಲವಾರು ಗುಡಿ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ವಿದೇಶಿ ಕಂಪನಿಗಳು ದೇಶದಲ್ಲೆಡೆ ವಿಜೃಂಭಣೆಯಿಂದ ದೇಶದ ಕಂಪನಿಗಳಿಗೆ ನಷ್ಟವಾಗುತ್ತಿದೆ. ಸರ್ಕಾರವು ಇಡೀ ದೇಶದ ಯುವಜನತೆಯನ್ನು ಅಭದ್ರತೆಯ ಕಡೆಗೆ ಕೊಂಡೊಯ್ಯುತ್ತಿದೆ ಎಂದು ಡಿವೈಎಫ್‌ಐನ ರಾಜ್ಯಾಧ್ಯಕ್ಷ ಭರತ್ ರಾಜ್ ವಿಷಾದ ವ್ಯಕ್ತಪಡಿಸಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಡಿವೈಎಫ್‌ಐ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ  ಚುನಾವಣಾ ಸಂದರ್ಭದಲ್ಲಿ ಜನರ ಮತಗಳನ್ನು ಪಡೆಯಲು ಹಲವು ಸಂಘಟನೆಗಳು ಜಿಲ್ಲೆಯಲ್ಲಿ ಹುಟ್ಟಿವೆ. ಡಿವೈಎಫ್‌ಐ ಸ್ವಯಂ ಹಿತಕ್ಕಾಗಿ ಕ್ಷುಲ್ಲಕ ವಿಷಯಕ್ಕೆ ಹುಟ್ಟಿದ್ದಲ್ಲ, ಸಂಘಟನೆಯಲ್ಲಿ ತ್ಯಾಗ, ಬಲಿದಾನ ಪರಂಪರೆಗಳಿಂದ ಹುಟ್ಟಿದ ಸಂಘಟನೆಯಾಗಿದೆ. ದೇಶದ ಐಕ್ಯತೆ ಹಾಗೂ ಅಸ್ಪೃಶ್ಯತೆ, ಅನ್ಯಾಯ ವಿರುದ್ಧವಾಗಿ ಹೋರಾಟ ಮಾಡಿದ್ದ ಸಂಘಟನೆಯಾಗಿದೆ. ಜಾತಿಗಳು ತಮ್ಮ ಅನುಕೂಲಕ್ಕಾಗಿ ಬಳಕೆ ಮಾಡಿಕೊಳ್ಳಬೇಕು. ಈ ಜಾತಿಗಳ ಕಟ್ಟಕಡೆಯ ವ್ಯಕ್ತಿಯನ್ನು ರಕ್ಷಿಸಲು ಆಗುತ್ತಿಲ್ಲ, ಜಾತಿ ಶ್ರೀಮಂತರನ್ನು ರಕ್ಷಿಸಲು ಮಾತ್ರ ಆಗುತ್ತಿದೆ. ನಮಗೆ ಜಾತಿ ಮುಖ್ಯವಲ್ಲ ಎಂಬುದು ಯುವಜನರಲ್ಲಿ ಬರಬೇಕಿದೆ ಎಂದರು.
ಯುವಜನತೆ ಪ್ರಜ್ಞಾಪೂರ್ವಕವಾಗಿ ಯೋಚನೆ ಮಾಡಬೇಕು. ಜಾತಿ ಮತ್ತು ಧರ್ಮಗಳು ನಮ್ಮನ್ನು ರಕ್ಷಣೆ ಮಾಡುವುದಿಲ್ಲ. ಸ್ವತಂತ್ರ ಭಾರತದಲ್ಲಿ ಶ್ರೀಮಂತ ಸಂಖ್ಯೆ ಹಾಗೂ ಬಡವರ ಸಂಖ್ಯೆಯು ಹೆಚ್ಚಾಗುತ್ತಿದೆ. ಜಾಗತೀಕರಣ, ಉದಾರೀಕರಣ ನೀತಿಗಳಲ್ಲಿ ಯುವಜನರನ್ನು ಭ್ರಮೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದು, ಗುಜರಾತ್ರಾಜ್ಯದಲ್ಲಿ ಇಂದು ಪರಿಣಾಮಕಾರಿಯಾಗಿ ಬದಲಾವಣೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಹೆಚ್ಚಾಗಿ ಕೈಗಾರಿಕೆಗಳು ಹೋಗುತ್ತಿವೆ ಏಕೆಂದರೆ ಅಲ್ಲಿನ ಮುಖ್ಯಮಂತ್ರಿ ನರೇಂದ್ರಮೋದಿ ಕೈಗಾರಿಕೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಅಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭದ್ರತೆಯಿಲ್ಲ ಆದರಿಂದ ಹೆಚ್ಚಾಗಿ ಅಲ್ಲಿಗೆ ಕೈಗಾರಿಕೆಗಳು ಆಕರ್ಷಿತವಾಗುತ್ತಿವೆ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಕಾರ್ಪೋರೆಟ್ ಸಂಸ್ಥೆಗಳು ತಮಗೆ ಬೇಕಾದ ಸರ್ಕಾರವನ್ನು ತರಲು ಪ್ರಯತ್ನ  ಮಾಡುತ್ತಿದೆ ಎಂದು ಆರೋಪಿಸಿದರು.
ಡಿವೈಎಫ್‌ಐ ಮುಖಂಡ ಎಂ.ಪಿ. ಮಿನಿವೆಂಕಟಪ್ಪ ಮಾತನಾಡಿ ಸರ್ಕಾರದ ನೀತಿಗಳಿಂದ ಇಂದು ಕೃಷಿರಂಗವು ದಿವಾಳಿ ಆಗುತ್ತ್ತಿದೆ.ದೇಶದಲ್ಲಿ ಶೇ. 40 ರಷ್ಟು ಹೆಚ್ಚು ಯುವಜನರಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಶೇ.60 ರಷ್ಟು ಯುವಜನರು ಬೀದಿ ಪಾಲಾಗುತ್ತಿದ್ದಾರೆ. ದೇಶದಲ್ಲಿ ಸಂಪತ್ತನ್ನು ಸೃಷ್ಟಿಸಬೇಕಾಗಿದ್ದ ಯುವಜನತೆ ಸರ್ಕಾರದ ನೀತಿಗಳಿಂದ  ಕೋಮುವಾದ, ಜಾತಿವಾದ ಮತ್ತು ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳಲ್ಲಿ ಹಾಗೂ ಸಮಾಜದ ಶಾಂತಿ ಕೆದಡುವ ಕೆಲಸಗಳಿಗೆ ಮುಂದಾಗುತ್ತಿರುವುದು ಆತಂಕ ವಿಷಯ ಎಂದಲ್ಲದೇ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಯುವಜನತೆಯನ್ನು ಸಂಘಟಿಸಿ ಶಾಶ್ವತ ನೀರಾವರಿ ಯೋಜನೆಗಳಿಗಾಗಿ ಜನಜಾಗೃತಿ ಜಾಥಾ ನಡೆಸಿ ಜನರನ್ನು ಹೋರಾಟಕ್ಕಿಳಿಸಿದ ಕೀರ್ತಿ ಡಿವೈಎಫ್‌ಐ ಸಂಘಟನೆಗೆ ಸಲ್ಲುತ್ತದೆ. ಜಿಲ್ಲೆಗೆ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಒತ್ತಾಯಿಸಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಈ ಸಮಾವೇಶದಲ್ಲಿ ಡಿವೈಎಫ್‌ಐನ ಮುಖಂಡ ಮುನೀಂದ್ರ, ಶಿವಪ್ಪ ಹಾಗೂ ಡಿವೈಎಫ್‌ಐನ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement