ಆಶಾ ಕಾರ್ಯಕರ್ತರಿಗೆ ಮಾಸಾಶನ: ವರ್ತೂರು ಪ್ರಕಾಶ್ ಭರವಸೆ
ಕೋಲಾರ: ತಮ್ಮ ಸ್ವಂತ ಹಣದಿಂದ 220 ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳು ತಲಾ ಒಂದು ಸಾವಿರ ರು. ಮಾಸಾಶನ ನೀಡುವುದಾಗಿ ಶಾಸಕ ಆರ್. ವರ್ತೂರ್ ಪ್ರಕಾಶ್ ಭರವಸೆ ನೀಡಿದ್ದಾರೆ.
ನಗರದ ಲಯನ್ಸ್ ಕ್ಲಬ್ನಲ್ಲಿ ಸಭೆ ಸೇರಿದ್ದ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಕಳೆದ ಆರು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಬಾಣಾಂತಿಯರ ಆರೋಗ್ಯ, ಗ್ರಾಮ ನೈರ್ಮಲ್ಯ ಮತ್ತು ವಿವಿಧ ಸಮೀಕ್ಷೆಗಳ ಮೂಲಕ ಗಣನೀಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸ್ವಂತ ಹಣದಿಂದ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದೆ, ಅದರಂತೆ ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 220 ಆಶಾ ಕಾರ್ಯಕರ್ತೆಯರಿಗೆ ಮುಂದಿನ ವಾರದಿಂದ ಪ್ರತಿ ತಿಂಗಳು ಒಂದು ಸಾವಿರ ರು. ನೀಡಲಾಗುವುದು ಎಂದು ತಿಳಿಸಿದರು.
ಸಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀ, ಕಾರ್ಯದರ್ಶಿ ಅಮರಾವತಿ, ಉಪಾಧ್ಯಕ್ಷೆ ನಿರ್ಮಲ, ಅನ್ನಪೂರ್ಣ, ಮುಖಂಡರಾದ ಮಮತ, ಚಂದ್ರಮ್ಮ, ಸುಭದ್ರ, ಶಾಂತಮ್ಮ, ಕಲಾವತಿ, ಪದ್ಮ, ಮುತ್ತುಲಕ್ಷ್ಮೀ, ರತ್ನಮ್ಮ, ಶಶಿಕಲಾ ಇದ್ದರು.