ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುರುಗಳಿಗೆ ಗೌರವ ನೀಡಿ: ಶಿವಶಂಕರರೆಡ್ಡಿ

Vishwanath S
Updated On : 2 Jul 2013, 1:00 am

ಗೌರಿಬಿದನೂರು: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಸಂಬಂಧ ನಿಜಕ್ಕೂ ಅವಿಸ್ಮರಣೀಯ. ಗುರುಗಳನ್ನು ಗೌರವಿಸುವ ಭಾವನೆ ಎಲ್ಲರನ್ನೂ ಇರಬೇಕು ಎಂದು ಶಾಸಕ ಶಿವಶಂಕರರೆಡ್ಡಿ ಹೇಳಿದರು.
ಇಲ್ಲಿನ ಹೊಸೂರಿನಲ್ಲಿ ಶನಿವಾರ ಸರ್ಕಾರಿ ಶಾಲಾ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಶಾಲೆ ಡಾ. ಎಚ್.ಎನ್. ಅವರಂಥ ಮಹಾ ಮೇಧಾವಿಗಳನ್ನು ನಾಡಿಗೆ ನೀಡಿದ ಶಾಲೆ ಎಂದು ಬಣ್ಣಿಸಿದರು.
ಜೀವನದಲ್ಲಿ ಸಾಧನೆ ಮುಖ್ಯ. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ಮಹತ್ವ ಕಡಿಮೆ ಯಾಗಿದೆ.  ಇಂದು ರ್ಯಾಂಕ್‌ಗಳು ಪಡೆಯುತ್ತಿರುವವರಲ್ಲಿ ಗ್ರಾಮೀಣ ಪ್ರತಿಭೆಗಳೇ ಹೆಚ್ಚು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಆಧರಿಸಿ ವಿದ್ಯೆ ನೀಡಬೇಕು ಎಂದು ಕರೆನೀಡಿದರು.
12 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿ.ತಿಮ್ಮಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡ ಎಚ್.ವಿ. ಮಂಜುನಾಥ್ ಮಾತನಾಡಿ, ಮಕ್ಕಳು ಉನ್ನತ ಸ್ಥಾನ ಪಡೆಯಲು ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಪುಟ್ಟ ಮಕ್ಕಳು ಗೌರವದಿಂದ ತಿಮ್ಮಯ್ಯ ಅವರಿಗೆ ಕಾಣಿಕೆಗಳನ್ನು ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್, ಮುಖಂಡರು, ಅಧಿಕಾರಿಗಳು ಹಾಜರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಶಿಕ್ಷಕಿ ಶಾರದಮ್ಮ ನಿರೂಪಿಸಿದರು. ಶಿಕ್ಷಕ ಸಿದ್ದಪ್ಪ ಸ್ವಾಗತಿಸಿ,  ವೆಂಕಟಾಚಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement