ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಗನಿಂದಲೇ ಕಳವು: ಬಂಧನ

Vishwanath S
Updated On : 2 Jul 2013, 1:07 am

ಕೋಲಾರ: ತನ್ನ ಮನೆಯಲ್ಲೇ ನಗ-ನಾಣ್ಯ ದೋಚಿದ್ದ ಯುವಕನೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕಾರಂಜಿ ಕಟ್ಟೆಯ ನಿವಾಸಿ ಮುನಿಯಪ್ಪ ಎಂಬುವರ ಪುತ್ರ ಮಂಜುನಾಥ್ ಕಳೆದ 20 ದಿನಗಳ ಹಿಂದೆ ಮನೆಯ ಬಿಗ ಮುರಿದು ಚಿನ್ನದ ಸರ, ಜುಮುಕಿ ಹಾಗೂ 30 ಸಾವಿರ ರು. ನಗದು ದೋಚಿದ್ದ. ಕಳ್ಳತನ ಮಾಡಿ ಯಾರಿಗೂ ಅನುಮಾನ ಬರದ ರೀತಿಯಲ್ಲಿ ನಡೆದುಕೊಂಡಿದ್ದ ಮಂಜುನಾಥ್ ಮೇಲೆ ಪೊಲೀಸರಿಗೆ ಅನುಮಾನ ಬಂದು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ.

95 ಫಲಾನುಭವಿಗಳಿಗೆ
ಆದೇಶ ಪತ್ರಗಳ ವಿತರಣೆ
ಗೌರಿಬಿದನೂರು: ಹೊಸೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶಿವಶಂಕರರೆಡ್ಡಿ ಅವರು ಹೊಸೂರು ಹೋಬಳಿಯ 39ಹಳ್ಳಿಗಳ 95 ಅಂಗವಿಕಲರು, ವಿಧವಾ ಮಾಸಾಶನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ, ಮುಂತಾದ ಕಲ್ಯಾಣ ಕಾರ್ಯಕ್ರಮಗಳಯಡಿ ಮಾಸಾಶನ ನೀಡಲು ಆದೇಶ ಪತ್ರಗಳನ್ನು ವಿತರಣೆ ಮಾಡಿದರು.ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ನಾಡ ಕಚೇರಿಯಲ್ಲೇ ಗ್ರಾಮಸ್ಥರು ತಮ್ಮ ಅನೇಕ ಕಾರ್ಯಗಳನ್ನು ಪೂರೈಸಿಕೊಳ್ಳಬಹುದು,ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆನೀಡಿದರು.
ವೇದಿಕೆಯಲ್ಲಿ ತಹಶಿಲ್ದಾರ್ ಡಾ. ಭಾಸ್ಕರ್ ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಮುಖಂಡ  ಹೆಚ್.ವಿ. ಮಂಜುನಾಥ್, ಚಿನ್ನಪ್ಪಯ್ಯ, ಜಿ.ಕೆ. ಸತೀಶ್, ಬೊಮ್ಮಣ್ಣ, ಮುರಳೀಧರ್, ಬಾಪೂಜಿ,ಪ್ರಕಾಶರೆಡ್ಡಿ, ಗ್ರಾ.ಪಂ. ಅಧ್ಯಕ್ಷ ಜಯರಾಂ, ನಾಡ ಕಚೇರಿ ಉಪ ತಹಶಿಲ್ದಾರ್ ಆಕ್ಕಮಹಾದೇವಿ, ರಾಜಸ್ವ ನಿರೀಕ್ಷಕರಾದ ಚಂದ್ರನ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement