ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ

Vishwanath S
Updated On : 2 Jul 2013, 1:06 am

ಚಿಂತಾಮಣಿ: ವರದಕ್ಷಿಣೆ ಕಿರುಕುಳದಿಂದ ಜಿಗುಪ್ಸೆಗೊಂಡ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಬೊಮ್ಮೆಕಲ್ಲು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬೊಮ್ಮಕಲ್ಲು ಗ್ರಾಮದ ಪದ್ಮಾವತಿ(22) ಎಂಬಾಕೆಯನ್ನು ಕಳೆದ ಹಲವು ತಿಂಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಿಂದ ಬೊಮ್ಮೆಕಲ್ಲು ಗ್ರಾಮ ನಿವಾಸಿ ದೇವಿಪ್ರಸಾದ್ ಎಂಬಾತನ ಜೊತೆ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಚಿನ್ನ, ಬೆಳ್ಳಿ, ಗೃಹಪಯೋಗಿ ವಸ್ತುಗಳು ಸೇರಿದಂತೆ ವರೋಪಚಾರ ನೀಡಿದ್ದರೂ ವರದಕ್ಷಿಣೆ ದಾಹದಿಂದ ಪದ್ಮವತಿಯನ್ನು ಹೊಡೆದು ನೇಣಿಗೆ ಹಾಕಿರುವುದಾಗಿ ತಾಯಿ ಅಶ್ವತ್ಥಮ್ಮ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಭಾನುವಾರ ರಾತ್ರಿ ಕುಟುಂಬ ಕಲಹದಿಂದ ನೊಂದ ಮಹಿಳೆಗೆ ವರದಕ್ಷಣೆ ಕಿರುಕುಳ ತಾಳಲಾರದೆ ನೇಣಿಗೆ ಶರಣಾಗಿರುವುದಾಗಿ ಮೃತಳ ಪೋಷಕರು ಪೊಲೀಸರಿಗೆ ಗಂಡನ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement