ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ
ಶಿಡ್ಲಘಟ್ಟ: ವಾಗ್ದೇವಿ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಸರ್ಕಾರಿ ಉರ್ದು ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ತೈಯಬಾನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆ ಅಧ್ಯಕ್ಷ ನಾರಾಯಣರೆಡ್ಡಿ ಮಾತನಾಡಿ, ವಿದ್ಯೆ ಇಂದು ಸಮಾಜದ ಬಹುಮುಖ್ಯ ಅಂಗವಾಗಿದೆ. ಅದನ್ನು ಆಸಕ್ತಿಯಿಂದ ಕಲಿಯಬೇಕು. ಸರ್ಕಾರ ವಿದ್ಯೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದೆ. ಅದನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕೆಂದು ಮುಂದೆ ಸಮಾಜದಲ್ಲಿ ದೊಡ್ಡವರಾದ ಮೇಲೆ ತಮ್ಮ ಕೈಲಾದ ಸಹಾಯ ಸಮಾಜಕ್ಕೆ ಮಾಡಬೇಕೆಂದು ಹೇಳಿದರು.
ಸಂಸ್ಥೆ 3 ವರ್ಷಗಳಿಂದ ನೋಟ್ ಪುಸ್ತಕಗಳನ್ನು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ತೈಯಬಾನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ 890 ನೋಟ್ಬುಕ್ಗಳನ್ನು ವಿತರಣೆ ಮಾಡಲಾಗಿದೆ. ವರದನಾಯಕನ ಹಳ್ಳಿ, ದೊಗರನಾಯಕನ ಹಳ್ಳಿ, ಇದ್ಲೂಡು, ತಲದುಮ್ಮನ ಹಳ್ಳಿ ಮುಂತಾದ ಹಳ್ಳಿಯ ಶಾಲೆಗಳಿಗೂ ಸಹ ನೋಟ್ಬುಕ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಬ್ಜೆಟ್ ಇನ್ಸ್ಪೆಕ್ಟರ್ ಉಸ್ನಾನ್ ಸಾಬಿ, ವಿ.ಮುನೇಗೌಡ, ಎಚ್.ಸೊಣ್ಣೇಗೌಡ, ರಾಮಣ್ಣ, ಉರ್ದು ಸಿಆರ್ಪಿಯ ಮುಕ್ತಿಯಾರ್ ಅಹಮದ್ ಖಾನ್, ಮುಖ್ಯ ಪ್ರಾಧ್ಯಾಪಕರಾದ ಮುಬೀನ್ ತಾಜ್, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.