ಶಿಥಿಲಗೊಂಡ ಪೊಲೀಸ್ ಠಾಣೆಗೆ ಕಾಯಕಲ್ಪ
ಕ.ಪ್ರ.ವಾರ್ತೆ , ಮುಳಬಾಗಲು , ಜು. 1
ಪಟ್ಟಣದ ಕೆಜಿಎಫ್ ರಸ್ತೆಯ ಪೊಲೀಸ್ ಠಾಣೆ ಶಿಥಿಲಾವಸ್ಧೆಗೆ ತಲುಪಿದೆ. ಅದನ್ನು ದುರಸ್ತಿ ಮಾಡುವುದಕ್ಕಿಂತಲೂ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೆಂಕಟಾಚಲಯ್ಯ ಹೇಳಿದರು.
ಸೋಮವಾರ ಕಟ್ಟಡದ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಳೆ ಬಂದರೆ ಸುರಿಯುವುದರಿಂದ ಗೋಡೆಗಳು, ಕಟ್ಟಡ ತೀವ್ರವಾಗಿ ಶಿಥಿಲವಾಗಿವೆ. ದುರಸ್ತಿ ಮಾಡಲು ಸಾಧ್ಯವಾಗದ ಹಂತಕ್ಕೆ ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಲಿ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮಾರ್ಗಸೂಚಿ ಕಳುಹಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭ ಸಬ್ಇನ್ಸ್ಪೆಕ್ಟರ್ ಫ್ರಾನ್ಸೀಸ್, ಸಹಾಯಕ ಅಭಿಯಂತರ ರಾಜೇಶ್, ಸಂತೋಷ್ ಹಾಜರಿದ್ದರು.