ಸುನಿಲ್ಕುಮಾರ್ ಎಬಿವಿಪಿ ಜಿಲ್ಲಾ ಸಂಚಾಲಕ
ಕ.ಪ್ರ. ವಾರ್ತೆ , ಕೆಜಿಎಫ್ , ಜು.2
ಎಬಿವಿಪಿ ಜಿಲ್ಲಾ ಸಂಚಾಲಕರಾಗಿ ಸುನಿಲ್ಕುಮಾರ್, ಜಿಲ್ಲಾ ಪ್ರಮುಖರಾಗಿ ನಾಗರಾಜು ಮತ್ತು ಸಹ ಪ್ರಮುಖರಾಗಿ ಪುನಿತ್ ಅವರುಗಳನ್ನು ಮೈಸೂರಿನಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಾಂತ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ್ದ ರಾಜ್ಯಾಧ್ಯಕ್ಷ ಬಿ.ಎಸ್. ವಸಂತ್ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಕೆ. ರಮೇಶ್ ಆಯ್ಕೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾಗಿ ಸುನಿಲ್ಕುಮಾರ್, ಜಿಲ್ಲಾ ಪ್ರಮುಖರಾಗಿ ನಾಗರಾಜು ಮತ್ತು ಸಹ ಪ್ರಮುಖರಾಗಿ ಪುನಿತ್ ಅವರನ್ನು ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಕೆಜಿಎಫ್ ಘಟಕದ ಎಬಿವಿಪಿ ವತಿಯಿಂದ ಅಭಿನಂದನೆ ಸೂಚಿಸಿದರು. ಈ ವೇಳೆ ಎಬಿವಿಪಿಯ ಹನುಮಂತ್, ಹರೀಶ್, ಚಂದ್ರಶೇಖರ್, ಅಭಿಷೇಕ್, ನವೀನ್ ಅಶೋಕ್ ಸೇರಿದಂತೆ ಇತರೆ ಕಾರ್ಯಕರ್ತರು ಹಾಜರಿದ್ದರು.