10ರಿಂದ ಹೊಸ ಪಡಿತರ ಯೋಜನೆ
ಚಿಕ್ಕಬಳ್ಳಾಪುರ: ನಗರದ ದರ್ಗಾ ಮೊಹಲ್ಲಾದಲ್ಲಿ ಜು.10 ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರದ ಹೊಸ ಪಡಿತರ ಯೋಜನೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಗೌರಿಬಿದನೂರು ಶಾಸಕ ಎನ್.ಹೆಚ್. ಶಿವಶಂಕರರೆಡ್ಡಿ ಉದ್ಘಾಟಿಸುವರು. ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಡಾ.ಎಂ. ವೀರಪ್ಪ ಮೊಯಿಲಿ ಹಾಗೂ ಸಣ್ಣ, ಅತೀಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಕೆ.ಹೆಚ್. ಮುನಿಯಪ್ಪ ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾವು ಮುಂತಾದವರು ಭಾಗವಹಿಸಲಿದ್ದಾರೆ.
ಪುರಸ್ಕಾರ: ಅರ್ಜಿ ಸಲ್ಲಿಕೆಗೆ 15 ಗಡುವು
ಚಿಂತಾಮಣಿ: ಗಾಣಿಗ ಸಮುದಾಯದ ಪ್ರತಿಭಾವಂತ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಸಲ್ಲಿಸಲು ಜು.10 ರಿಂದ ಆ.5 ರವರೆಗೂ ಕೊನೆ ದಿನವಾಗಿರುತ್ತದೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ರಮೇಶ್ ತಿಳಿಸಿದ್ದಾರೆ. ಪಟ್ಟಣದ ಟ್ಯಾಂಕ್ ಬಂಡ್ ರಸ್ತೆಯ ಬಳಿ ಇರುವ ಶಿಲ್ಪಾ ವಿದ್ಯಾಸಂಸ್ಥೆಯಲ್ಲಿ ತಾಲೂಕು ಗಾಣಿಗ ಸಮುದಾಯದ ಪದಾಧಿಕಾರಿಗಳು ಶನಿವಾರ ಸಭೆ ನಡೆಸಿದರು. ಸಂಘದ ಪದಾಧಿಕಾರಿಗಳಾದ ಕೆ.ಆರ್.ನರಸಿಂಹಪ್ಪ, ಕೆ.ವಿ. ಸುಬ್ರಮಣ್ಯಂ, ಎಂ.ಕೃಷ್ಣಮೂರ್ತಿ, ಶಂಕರ್, ಮಂಜುನಾಥ್, ನಾಗರಾಜ್, ಕೆಂಚಾರ್ಲಹಳ್ಳಿ ಶ್ರೀನಿವಾಸ್, ಚಲಪತಿ, ವೆಂಕಟೇಶ್, ಕರಿಯಪ್ಪ ಸೇರಿದಂತೆ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.
ತಾಲೂಕು ಮಟ್ಟದ ರೈತರ ತರಬೇತಿ
ಗುಡಿಬಂಡೆ: ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿ ತಾಲೂಕು ಮಟ್ಟದ ರೈತರ ತರಬೇತಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಎನ್. ನಾರಾಯಣಸ್ವಾಮಿ ಕೃಷಿ ಪದ್ಧತಿಯಲ್ಲಿನ ಹಲವಾರು ಪದ್ಧತಿಗಳನ್ನು ತಿಳಿಯಲು ಕೃಷಿ ಇಲಾಖೆಯ ವತಿಯಿಂದ ನೀಡುವ ಎಲ್ಲಾ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ತರಬೇತಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕೃಷಿ ಸಹಾಯಕ ನಿರ್ದೇಶಕ ನರಸರಾಜು ಸರ್ಕಾರದ ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕೆಂದರು. ಕಜಿ.ಎಸ್. ನಾಗರಾಜ್, ವಾಹಿನಿ ಸಂಸ್ಥೆಯ ಹಚ್.ಆರ್. ಸುರೇಶ್, ಇಕ್ರಿಸಾಟ್ ಸಂಸ್ಥೆಯ ಗೋಪಾಲಾಚಾರ್, ತೋಟಗಾರಿಕೆ ಇಲಾಖೆಯ ಪ್ರಸನ್ನ, ಕೃಷಿ ಇಲಾಖೆಯ ಎನ್. ಶಂಕರಯ್ಯ, ಆತ್ಮ ಯೋಜನೆ ಬಿ.ವಿ.ರಂಗನಾಥ್, ರೈತ ಸಂಘದ ನಾರಾಯಣಸ್ವಾಮಿ, ಜಲಾನಯನ ಇಲಾಖೆಯ ಪ್ರಸನ್ನ ಕುಮಾರ್ ಹಾಗೂ ಭೂಚೇತನ ಅನುವುಗಾರರು ಭಾಗವಹಿಸಿದ್ದರು.