'ಕುಡಿವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ'
ಟೇಕಲ್: ಟೇಕಲ್ನ ಕೆ.ಜಿ.ಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದ ಪರಿಣಾಮ ಒಂದುವರೆ ತಿಂಗಳಿನ ಹಿಂದೆ ಕೊರೆಸಿದ್ದ ಕೊಳವೆ ಬಾವಿಗೆ ಶಾಸಕ ಮಂಜುನಾಥಗೌಡರು ಮೋಟಾ ರ್ ಪಂಪನ್ನು ನೀಡಲು ಒಪ್ಪಿಗೆ ನೀಡಿದ್ದು, ಇನ್ನು 15 ದಿನದಲ್ಲಿ ಈ ಕೊಳವೆ ಬಾವಿಗೆ ಪಂಪು ಮೋಟಾರ್ ಅಳವಡಿಸಿ ಕೆ.ಜಿ.ಹಳ್ಳಿ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವುದಾಗ ಕೆ.ಜಿ.ಹಳ್ಳಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಗೋವಿಂದೆಗೌಡ ತಿಳಿಸಿದರು.
ಕೆ.ಜಿ.ಹಳ್ಳಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಘೀ ಬಗ್ಗೆ ಅರಿವು ಮೂಡಿಸಲು ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಇಲಾಖೆ ತಾಲೂಕು ಮೇಲ್ವಿಚಾರಕ ಎಸ್.ಬಾಬು ಮಾತನಾಡಿ, ಜು.5 ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಟೇಕಲ್ನ ಸರ್ಕಾರಿ ಆಸ್ಪತ್ರೆಯಿಂದ ಡೆಂಘೀ ಜ್ವರದ ಬಗ್ಗೆ ಆರೋಗ್ಯ ಅರಿವಿನ ಜಾತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೆ.ಜಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಜಾಥಾ ಸಂಚರಿಸಲಿದ್ದು ಎಲ್ಲಾ ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರು ಸಹಕರಿಸಬೇಕೆಂದು ಕೋರಿದೆ.
ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್, ಸಭೆಯ ಅಧ್ಯಕ್ಷತೆ ವಹಿಸಿದ್ದು ಸಭೆಯಲ್ಲಿ ವಿನೋದ್ಗೌಡ, ಮುನಿಯಪ್ಪ, ರಮೇಶ್, ತಿಮ್ಮರಾಯಪ್ಪ, ವೆಂಕಟೇಶಪ್ಪ, ಸಿ. ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.