ತೆಲುಗು ಚಿತ್ರ ಪ್ರದರ್ಶನ ವಿರುದ್ಧ ಪ್ರತಿಭಟನೆ
ಮಾಲೂರು: ಇಲ್ಲಿನ ಬಾಲಾಜಿ ಚಿತ್ರ ಮಂದಿರದಲ್ಲಿ ಪರಭಾಷೆಯ ಚಿತ್ರ ಪ್ರದರ್ಶನ ಖಂಡಿಸಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರದರ್ಶನ ರದ್ದುಪಡಿಸಿದ ಘಟನೆ ಶನಿವಾರ ನಡೆದಿದೆ.ರಾಜ್ಯಾದಾದ್ಯಂತ ಶುಕ್ರವಾರ ಬಿಡುಗಡೆಯಾದ ತೆಲುಗು ಭಾಷೆಯ 'ಯಮುಡು-2'ರ ಚಿತ್ರವನ್ನು ಇಲ್ಲಿನ ಬಾಲಾಜಿ ಚಿತ್ರಮಂದಿರದಲ್ಲಿ ಇದೇ ಪ್ರಥಮ ಬಾರಿಗೆ ಬಿಡುಗಡೆ ಮಾಡಲಾಗಿತ್ತು. ಈ ಕ್ರಮ ಖಂಡಿಸಿ, ಸ್ಥಳೀಯ ಕರವೇ ಕಾರ್ಯಕರ್ತರು ಚಿತ್ರಮಂದಿರ ಮುಂಭಾಗ ಪ್ರತಿಭಟನೆ ನಡೆಸಿದರು. ಕರವೇ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿದರು. ಸಂಘಟನೆಯ ಎಸ್.ಎಂ.ರಾಜು, ಪ್ರಸನ್ನ ಕುಮಾರ್,ಬಡಗಿ ಶ್ರೀನಿವಾಸ್, ನವೀನ್, ಆಟೋ ಮಂಜು, ಚೆನ್ನಕೃಷ್ಣ, ರವಿಕುಮಾರ್, ನಾಗರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.