ನಾಳೆ ಮಾದಿಗ ದಂಡೋರ ಪ್ರತಿಭಟನೆ
ಮುಳಬಾಗಲು: ಮಾದಿಗ ಜನಾಂಗಕ್ಕೆ ಮೀಸಲಾತಿ ನೀಡಲುಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಕಚೇರಿ ಎದುರು ಜು.8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಾರ ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಆರ್.ನಾಗರಾಜ್ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾತನಾಡಿದ ಅವರು, ಡಾ.ಎ.ಜೆ.ಸದಾಶಿವ ಅಯೋಗದ ಜಾರಿಗೆ ಹಿಂದಿನ ಬಿಜೆಪಿ ಸರ್ಕಾರ ಮುಂದಾಗಲಿಲ್ಲ ಸಾಮಾಜಿಕ ಕಳಿಕಳಿ ಹಿನ್ನಲೆಯಿರುವ ಸಿದ್ದರಾಮಯ್ಯ ಸದಾಶಿವ ವರದಿ ವಿಧಾನಸಭೆಯಲ್ಲಿ ಅನುಮೋದನೆ ಕೊಡಿಸುವರೆಂಬ ಆಸೆ ನಮ್ಮಗಳಗಾಗಿದೆ ಎಂದು ನುಡಿದರು. ಮಾದಿಗ ಜನಾಂಗದ ಹೆಚ್ಚಿನ ಸಂಖ್ಯೆಯ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಅವರು ಕೋರಿದರು.
ರಾಜ್ಯ ಮಾದಿಗ ದಂಡೋರ ಜಂಟೆ ಕಾರ್ಯದರ್ಶಿ ಮುದ್ದವೆಂಕಟೇಶ್, ದಂಡೋರ ರಾಜ್ಯ ವಕೀಲರ ಸಂಘದ ವಿ.ಜಯಪ್ಪ. ಟಿ.ನಟರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಲಕ್ಷ್ಯಯ್ಯ, ಕಾರ್ಯದರ್ಶಿ ವೇಣು,ಜಂಟೆ ಕಾರ್ಯದರ್ಶಿ ರಾಜು. ಸಂಚಾಲಕ ಬಿ.ಮುನಿಯಪ್ಪ. ಕೆಜಿಎಫ್ಘ್‌ಟಕದ ಅಧ್ಯಕ್ಷ ಕಣ್ಣೂರು ವಿಜಯ್,ಕೋದಂಡಪ್ಪ, ಶ್ರೀನಿವಾಸಪುರ ದಂಡೋರ ಅಧ್ಯಕ್ಷ ವಿ.ಶಿವಣ್ಣ, ಬಂಗಾರು ಪೇಟಿ ದಂಡೋರ ಮುಖಂಡರಾದ ಎಸ್. ಮುನಿರತ್ನಂ, ಮುಳಬಾಗಲು ಘಟಕದ ಮುನಿರತ್ನಂ, ವಿ.ಮುನೀಂದ್ರ ಭಾಗವಹಿಸಿದ್ದರು.