ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಖದ ವಿಕಲಾಂಗತೆ ಗುಣಪಡಿಸಬಹುದು: ಡಾ.ಸತೀಶ್

Vishwanath S
Updated On : 7 Jul 2013, 1:06 am

ಕ.ಪ್ರ.ವಾರ್ತೆ , ಮಾಲೂರು , ಜು. 6
ಮುಖದ ವಿಕಲಾಂಗತೆ ಗುಣವಾಗದ ಸಮಸ್ಯೆ ಅಲ್ಲ. ಅದನ್ನು ಸಂಪೂರ್ಣ ಕಡಿಮೆ ವೆಚ್ಚದಲ್ಲಿ ಗುಣಪಡಿಸಬಹುದು. ಈ ಬಗ್ಗೆ ಆಂತಕ ಪಡಬೇಕಾಗಿಲ್ಲ ಎಂದು ಬೆಂಗಳೂರಿನ ಪ್ರತಿಷ್ಟಿತ ಎಚ್.ಸಿ.ಜಿ. ಆಸ್ವತ್ರೆ ಯ ವೈದ್ಯ ಡಾ.ಸತೀಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿ ಬೆಂಗಳೂರಿನ ಟ್ರಿನಿಟ್ ಕೇರ್ ಫೌಂಡೇಶನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಉಚಿತ ಮುಖ ಮತ್ತು ದವಡೆ ವಿಕೃತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹುಟ್ಟಿನಿಂದಲೇ ಅಥವಾ ಬೆಳೆಯುವ ಹಂತದಲ್ಲಿ ಆಟವಾಡುವಾಗ ಬಿದ್ದು ಅದರ ಪರಿಣಾಮವಾಗಿ ಕೆಲವರು ಮುಖ ವಿಕಲಾಂಗತೆ ಹೊಂದಿರುತ್ತಾರೆ. ಅಂಥ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಮುಖದ ವಿಕಲಾಂತೆ ಹೊಂದಿದ್ದ ಗ್ರಾಮೀಣ ಪ್ರದೇಶ ಜನತೆ ದುಬಾರಿ ಚಿಕಿತ್ಸೆ ಆಗಬಹುದೆಂಬ ಹೆದರಿಕೆಯಲ್ಲಿ ಮಗುವಿಗೆ ಚಿಕಿತ್ಸೆ ಮಾಡಿಸದೆ ಬಿಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಟ್ರಿನಿಟಿ ಕೇರ್ ಫೌಂಡೇಷನ್ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಟ್ರಿನಿಟಿ ಕೇರ್ನ ಸಿರಾಜ್ ಮಾತನಾಡಿದರು. ಪಾಸಣಾ ಶಿಬಿರದಲ್ಲಿ ಸೀಳು ತುಟಿ ಸೇರಿದಂತೆ ಇತರೆ ಮುಖ ವಿಕಲಾಂಗತೆ ಹೊಂದಿದ್ದ 24 ರೋಗಿಗಳನ್ನು ತಪಾಸಣೆ ಮಾಡಿ 11 ರೋಗಿಗಳನ್ನು ಮುಂದಿನ ಹಂತದ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಹಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement