ಅಂಕಿತಗೆ 5000 ನೆರವು
ಕ.ಪ್ರ.ವಾರ್ತೆ, ಮಾಲೂರು, ಜು.7
ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದೊಡ್ಡ ಕಡತೂರಿನ ಕಾಲೇಜು ವಿದ್ಯಾರ್ಥಿನಿ ಅಂಕಿತ ಮನೆಗೆ ಭಾನುವಾರ ಭೇಟಿ ನೀಡಿದ ಸ್ಥಳೀಯ ಕರ್ನಾಟಕ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಜಿ.ಶ್ರೀನಿವಾಸಲು 5000 ಸಹಾಯ ಧನ ವಿತರಿಸಿದರು.
ಇಲ್ಲಿನ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಕಿತ ಅವರಿಗೆ ಕಳೆದ ವರ್ಷ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಲಗಾಲು ನಡೆಯಲು ಆಗದ ಸ್ಥಿತಿ ಉಂಟಾಗಿತ್ತು. ಈಗ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಇದಕ್ಕಾಗಿ ಅಂಕಿತಳ ತಂದೆ ನಾರಾಯಣಸ್ವಾಮಿ ತನ್ನ 4 ಗುಂಟೆ ಜಮೀನನಲ್ಲಿ 2 ಗುಂಟೆ ಜಮೀನನ್ನು 2.5 ಲಕ್ಷಗಳಿಗೆ ಮಾರಾಟ ಮಾಡಿದ್ದರೆ. ಆದರೆ, ಚಿಕಿತ್ಸೆ ಖರ್ಚು 4 ಲಕ್ಷಕ್ಕೂ ಹೆಚ್ಚಾಗಿದೆ. ಅಂಕಿತಳ ಪೋಷಕರು ಸಹಾಯದ ನೀರಿಕ್ಷೆಯಲ್ಲಿದ್ದರು.
ವಿಷಯ ತಿಳಿದ ಸಮಿತಿ ರಾಜ್ಯಾಧ್ಯಕ್ಷ ಜಿ.ಶ್ರೀನಿವಾಸಯ್ಯ ಅವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಿ.ಎಂ.ತಿಮ್ಮರಾಯಪ್ಪ ಅವರ 73ನೇ ಜನ್ಮ ದಿನಾಚರಣೆ ಅಂಗವಾಗಿ ಅಂಕಿತಳ ಮನೆಗೆ ಭೇಟಿ ನೀಡಿ ಸಹಾಯ ಧನ ವಿತರಿಸಿದರು.
ಅಂಕಿತ ಅವರ ತಂದೆ ನಾರಾಯಣಸ್ವಾಮಿ, ಸಂಘಟನೆಯ ಪ್ರಕಾಶ್, ಶ್ರೀನಿವಾಸ್, ಶ್ರೀನಾಥ್, ಬಸವಾರಾಧ್ಯ,ಅಶ್ವತ್ಥಪ್ಪ ಇದ್ದರು.