ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಸಂಬಂಧ: ವ್ಯಕ್ತಿ ಕೊಲೆ

Vishwanath S
Updated On : 8 Jul 2013, 12:57 pm

ಗೌರಿಬಿದನೂರು:  ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀನರಸಪ್ಪ (35) ಮೃತಪಟ್ಟ ವ್ಯಕ್ತಿಯಾಗಿದ್ದು, ಮಲ್ಲಿಕಾರ್ಜುನ ಎಂಬವನು ಹತ್ಯೆಗೈದಿದ್ದಾನೆ. ಬಿಜಾಪುರದಿಂದ ಬಂದು ಇಲ್ಲಿಗೆ ಸಮೀಪದ ತೋಟವನ್ನು ನೋಡಿಕೊಳ್ಳುತ್ತಿದ್ದ. ಲಕ್ಷ್ಮೀನರಸಪ್ಪನಿಗೆ ಪತ್ನಿ ಪದ್ಮಾವತಿ, 8 ವರ್ಷದ ಗಂಡುಮಗು, 6 ವರ್ಷದ ಹೆಣ್ಣು ಮಗುವಿದೆ.
ಈ ಹಿಂದೆ ಲಕ್ಷ್ಮೀನರಸಪ್ಪನ ಮನೆಗೆ ಹೋಗಿದ್ದ ಮಲ್ಲಿಕಾರ್ಜುನ ಆತನ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಲಕ್ಷ್ಮೀನರಸಪ್ಪ ಮತ್ತು ಗ್ರಾಮಸ್ಥರು ಸೇರಿ ಮಲ್ಲಿಕಾರ್ಜುನನನ್ನು ಥಳಿಸಿ ಎಚ್ಚರಿಕೆ ನೀಡಿದ್ದರು. ಈ ದ್ವೇಷ ಸಾಧಿಸಿದ ಮಲ್ಲಿಕಾರ್ಜುನ ಹೊಂಚುಹಾಕಿ ಶನಿವಾರ ಮಧ್ಯಾಹ್ನ ತೋಟದ ಮನೆಯ ಬಾತ್ ರೂಮಿನಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ.
ಶವವನ್ನು ಬಾಳೆ ದಿಂಡಿನ ಕಸದಲ್ಲಿ ಮುಚ್ಚಿಹಾಕಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ್, ಸಿಪಿಐ ಲಕ್ಷ್ಮಯ್ಯ, ಭೇಟಿ ನೀಡಿದ್ದಾರೆ. ಮಂಚೇನಹಳ್ಳಿ ಪಿಎಸ್‌ಐ ಸುಧಾಕರರೆಡ್ಡಿ ಕೊಲೆ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement