ಜಲ ಸಂವರ್ಧನೆ ಯೋಜನೆ ಮುಂದುವರಿಸಲು ಒತ್ತಾಯ
ಮಾಲೂರು: ರಾಜ್ಯ ಕೆರೆ ಬಳಕೆದಾರರ ಸಂಘದ ನಿಯೋಗ ಇತ್ತೀಚೆಗೆ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಜಲ ಸಂವರ್ಧನೆ ಯೋಜನೆ ಕೈ ಬಿಡದಂತೆ ಒತ್ತಾಯಿಸಿ, ಮನವಿ ಅರ್ಪಿಸಿತು.
ಕೆರೆ ಬಳಕೆದಾರರ ಸಂಘದ ರಾಜ್ಯಾಧ್ಯಕ್ಷ ಪ್ರೇಮ ಕುಮಾರ್ ಹಾಗೂ ಕಾರ್ಯದರ್ಶಿ ಭುವನಹಳ್ಳಿ ವೆಂಕಟ ಚಲಪತಿ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿದರು. ಕೆರೆಗಳ ಉಳಿವು, ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಬೇಕಾಗಿದೆ. ಇದರಿಂದ ಸ್ಥಳೀಯರ ಭಾಗವಹಿಸುವಿಕೆಯ ಜಲ ಸಂವರ್ಧನೆ ಯೋಜನೆ ಕೈ ಬಿಡಬೇಕೆಂಬ ಇಂದಿನ ರಾಜ್ಯ ಸರ್ಕಾರದ ತೀರ್ಮಾನ ಮರುಪರಿಶೀಲಿಸಿ ಯೋಜನೆ ಮುಂದುವರಿಸುವಂತೆ ಮನವಿ ಮಾಡಿದರು.
ಸಚಿವ ಶಿವರಾಜ್ ತಂಗಡಗಿ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡದರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಭುವನಹಳ್ಳಿ ವೆಂಕಟಚಲಪತಿ ತಿಳಿಸಿದ್ದಾರೆ. ಮನವಿ ಅರ್ಪಿಸುವ ಸಂದರ್ಭ ಜಿಲ್ಲೆಯ ಇತರೆ ತಾಲೂಕಿನ ಕೆರೆ ಬಳಕೆದಾರ ಸಂಘದ ಅಧ್ಯಕ್ಷರು ಇದ್ದರು.