ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೀತ ವಿಮುಕ್ತರ ಸೌಲಭ್ಯಕ್ಕೆ ಒತ್ತಾಯ: ಎಸಿಗೆ ಮನವಿ

Vishwanath S
Updated On : 8 Jul 2013, 12:54 pm

ಕ.ಪ್ರ. ವಾರ್ತೆ , ಕೋಲಾರ , ಜು.7
ಜೀತ ವಿಮುಕ್ತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುವಂತೆ ಒತ್ತಾಯಿಸಿ ಜೀತ ವಿಮುಕ್ತ ಕರ್ನಾಟಕ ಸಂಘಟನೆಯಿಂದ ಶನಿವಾರ ಕೋಲಾರ ಉಪ ವಿಭಾಗಾಧಿಕಾರಿ ಆಯುಷಾ ಫರ್ವೀನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜೀತ ವಿಮುಕ್ತರಿಗೆ ಸರ್ಕಾರ ಪುನರ್ವ್‌ಸತಿಗಾಗಿ ಕಾರ್ಯಕ್ರಮ ರೂಪಿಸಿದ್ದರೂ ಅಧಿಕಾರಿಗಳು ನಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಸಂಘಟನೆಯ ಕಾರ್ಯಕರ್ತರು ದೂರಿದರು. ಜೀತದಾಳುಗಳ ಬಿಡುಗಡೆ ಮತ್ತು ಪುನರ್ವ್‌ಸತಿಗಾಗಿ ಅರ್ಜಿಗಳನ್ನು ಹಾಕಿದರೂ ಅಧಿಕಾರಿಗಳು ತನಿಖೆ ಮಾಡುವಲ್ಲಿ ಮೀನಾ ಮೇಷ ಎಣಿಸುತ್ತಿದ್ದಾರೆ. ಜುಲೈ ತಿಂಗಳಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜೀತ ವಿಮುಕ್ತರ ಸೌಲಭ್ಯಕ್ಕಾಗಿ ಪ್ರತ್ಯೇಕವಾಗಿ ಹಣ ಮೀಸಲಿಡಬೇಕು ಮತ್ತು ತನಿಖೆಯಾಗಿರುವ ವರದಿಗಳನ್ನು ತಕ್ಷಣ ಮೇಲಾಧಿಕಾರಿಗಳಿಗೆ ಸಲ್ಲಿಸಿ ಬಿಡುಗಡೆ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿದರು.
ಪ್ರತಿ ವರ್ಷವು ರಾಜ್ಯದಾದ್ಯಂತ ಏಕಕಾಲದಲ್ಲಿ ಜೀತದಾಳುಗಳ ಸಮೀಕ್ಷೆ ನಡೆಸಬೇಕು,ಬಿಡುಗಡೆಗೊಂಡ ಜೀತದಾಳುಗಳಿಗೆ ಈಗ ಜಾರಿಯಲ್ಲಿರುವ ಮಾಸಿಕ 300 ರು. ಸಹಾಯಧನವನ್ನು 2 ಸಾವಿರಕ್ಕೆ ಹೆಚ್ಚಿಸಬೇಕು, ಜೀತ ವಿಮುಕ್ತರಿಗೆ ನೀಡುವ 20 ಸಾವಿರ ರು.ಗಳ ಪರಿಹಾರ ಧನವನ್ನು 2 ಲಕ್ಷಕ್ಕೆ ಹೆಚ್ಚಿಸಬೇಕು ಹಾಗೂ  ಜಿಲ್ಲಾ ಮತ್ತು ಉಪವಿಭಾಗ ಮಟ್ಟದ ಜಾಗೃತ ಸಮಿತಿ ಸಭೆಯನ್ನು ಪ್ರತಿ ತಿಂಗಳಿಗೊಮ್ಮೆ ಕಡ್‌ಡಾಯವಾಗಿ ನಡೆಸಬೇಕೆಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಬಿಡುಗಡೆಗೊಂಡ ಜೀತದಾಳುಗಳಿಗೆ ಲಭ್ಯವಿರುವ ಕಡೆ ಸರ್ಕಾರಿ ಭೂಮಿಯನ್ನು ಗುರುತಿಸಿ ತಲಾ ಒಂದು ಕುಟುಂಬಕ್ಕೆ 5 ಎಕರೆ ಭೂಮಿ ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಸವಲತ್ತುಗಳನ್ನು ದೊಕರಸಿಕೊಡುವ ಮೂಲಕ ಜೀತ ವಿಮುಕ್ತರು ಸಮಾಜದ ಮುಖ್ಯ ವಾಹಿನಿಯಲ್ಲಿ ಬರುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮನವಿ ಪತ್ರ ನೀಡುವಾಗ ಸಂಘಟನೆಯ ಜಿಲ್ಲಾ ಸಂಚಾಲಕ ರಾಮಚಂದ್ರಪ್ಪ, ತಾಲೂಕು ಸಂಚಾಲಕಿ  ಸುಮತಿ,ಶಕುಂತಲ,ದಿವ್ಯರಾಣಿ,ಚಿಟ್ಟಮ್ಮ, ವಿ.ಭಾರತಿ, ತಿಪ್ಪಣ್ಣ, ಏತೂರು.ವೆಂಕಟೇಶ್, ಪಾಪೇನಹಳ್ಳಿ ಚಿನ್ನಣ್ಣ, ಕೀಲುಕೊಪ್ಪ, ಜಯಮ್ಮ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಲಕ ಯಲ್ಲಪ್ಪ,ಕಲಾ ಸಂಚಾಲಕ ನಾಗಪ್ಪ ಹಾಗೂ ಜೀತದಾಳುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement