ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರತ್ಯೇಕ ಹಣ ಮೀಸಲಿಡಲು ಒತ್ತಾಯ

Vishwanath S
Updated On : 8 Jul 2013, 12:54 pm

ಬಂಗಾರಪೇಟೆ:  ಜೀತ ವಿಮುಕ್ತರ ಪುನರ್ವಸತಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಪ್ರತ್ಯೇಕವಾದ ಹಣ ಮೀಸಲಿಡಬೇಕೆಂದು ಒತ್ತಾಯಿಸಿ ಜೀತ ವಿಮುಕ್ತ ಕರ್ನಾಟಕ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಜೀತ ಪದ್ಧತಿ ನಿರ್ಮೂಲನೆ ಜಾರಿಗೆ ಬಂದು ಸುಮಾರು 37 ವರ್ಷಗಳೇ ಕಳೆದರೂ, ಸರ್ಕಾರದ ಆದೇಶಕ್ಕೆ ಅಧಿಕಾರಿ ವರ್ಗ ಕಿಂಚಿತ್ತೂ ಬೆಲೆ ನೀಡಿಲ್ಲ. ಸರ್ಕಾರದ ಆದೇಶವನ್ನು ಕಸದ ಬುಟ್ಟಿಗೆ ಎಸೆದು ಜೀತದಾಳುಗಳ ಸಮಸ್ಯೆಗಳನ್ನು ಕೇಲುವವರೇ ಇಲ್ಲದಂತಾಗಿದೆ. ಈ ಬಗ್ಗೆ ಜೀವಿಕ ಸಂಘಟನೆ ಜೀತದಾಳುಗಳ ಬಗ್ಗೆ ಅಗತ್ಯ ಮಾಹಿತಿ ನೀಡಿ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಕೋರಲಾಗಿದೆ. ಆದರೆ, ಇದುವರೆಗೂ ಸ್ವಂದಿಸಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಕಟುವಾಗಿ ಖಂಡಿಸಿದರು. 2013 ಸಾಲಿನಲ್ಲಿ ಮಂಡನೆ ಆಗಲಿರುವ ರಾಜ್ಯ ಬಜೆಟ್‌ನಲ್ಲಿ ಜೀತ ವಿಮುಕ್ತರಿಗೆ ಪ್ರತ್ಯೇಕ ಹಣ ಮೀಸಲಿಡಬೇಕು. ಕೋಲಾರ ಜಿಲ್ಲೆಗೆ ಒಳಪಟ್ಟ ಎಲ್ಲಾ ತಾಲೂಕುಗಳಿಂದ ಜೀತದಾಳು ಬಿಡುಗಡೆ ಮತ್ತು ಪುನರ್ವಸತಿಗಾಗಿ ಬಂದಿರುವ ಅರ್ಜಿಗಳನ್ನು ತಕ್ಷಣ ತನಿಖೆ ನಡೆಸಿ ವಿಲೇವಾರಿ ಮಾಡಬೇಕು. ಪ್ರತಿ ವರ್ಷ ರಾಜ್ಯದ್ಯಾಂತ ಏಕಕಾಲದಲ್ಲಿ ಜೀತದಾಳುಗಳ ಮರು ಸಮೀಕ್ಷೆ ನಡೆಸಬೇಕು. ಜೀತದಿಂದ ವಿಮುಕ್ತಿಗೊಂಡಿರುವವರಿಗೆ ನೀಡುತ್ತಿರುವ 300 ಬದಲಿಗೆ 2000 ನೀಡಬೇಕು. ಜೀತ ನಿರ್ಮೂಲನೆ ಸಮಗ್ರ ಅನುಷ್ಟಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕವಾಗಿ ಒಬ್ಬ ಹಿರಿಯ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕು. ಜೀತದಿಂದ ಬಿಡುಗಡೆಗೊಂಡಿರುವ ಫಲಾನುಭವಿಗಳಿಗೆ ಸರ್ಕಾರ ತಲಾ 5 ಎಕರೆ ಭೂಮಿ ಒದಗಿಸುವುದು ಸೇರಿದಂತೆ ಮತ್ತಿತರೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೀತದಾಳುಗಳು ನಮಗೆ ಪ್ರತ್ಯೇಕ ಹಣ ಮೀಸಲಿಡಬೇಕೆಂಬ ಘೋಷಣೆಗಳನ್ನು ಕೂಗಿ ಮೆರವಣಿಗೆ ಮಾಡಿದರು. ಪ್ರತಿಭಟನೆಯಲ್ಲಿ ಜೀವಿಕ ಸಂಘಟನೆಯ ತಾಲೂಕು ಸಂಚಾಲಕ ರಾಮಚಂದ್ರ, ಎ.ಎನ್. ಸುಮತಿ, ಶಕುಂತಲ, ಭಾರತಿ, ದಿವ್ಯಾರಾಣಿ, ಚಿಟ್ಟಮ್ಮ, ಕೆ.ಎಂ. ತಿಪ್ಪಣ್ಣ, ವೆಂಕಟೇಶ್, ಜಯಮ್ಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement