ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿನ್ನದ ಗಣಿ ಗ್ಲೋಬಲ್ ಟೆಂಡರ್: ಇಂದು ಸುಪ್ರೀಂ ಕೋರ್ಟ್ ತೀರ್ಪು

Mainashree
Updated On : 9 Jul 2013, 12:12 pm

ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್‌ಗೆ ನೀಡುವ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನ ಪ್ರಯುಕ್ತ ಮಾಜಿ ಶಾಸಕ ಹಾಗೂ ಕಾರ್ಮಿಕರ ಒಕ್ಕೂಟದ ಸಂಘಗಳ ಮುಖಂಡರಾದ  ವೈ.ಸಂಪಂಗಿ ನೇತೃತ್ವದಲ್ಲಿ ಬಿಜಿಎಂಎಲ್ ಕಾರ್ಮಿಕ ಸಂಘಗಳ ಮುಖಂಡರ ಸಭೆ ನಡೆಯಿತು.
ಒಗ್ಗಟ್ಟು ಪ್ರದರ್ಶನಕ್ಕೆ ಕಿವಿಮಾತು: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವೈ.ಸಂಪಂಗಿ,  ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಬಿಜಿಎಂಎಲ್ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್ ಅಥವಾ ಬಿಜಿಎಂಎಲ್ ಕಾರ್ಮಿಕರ ಸೊಸೈಟಿ ನಡೆಸುವ ಬಗ್ಗೆ ತೀರ್ಪು ಬರುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಎಲ್ಲಾ 16 ಕಾರ್ಮಿಕ ಸಂಘಗಳು ಒಗಟ್ಟು ಪ್ರದರ್ಶಿಸಿ ಕಾರ್ಮಿಕರಿಗೆ ಮತ್ತು ಕೆಜಿಎಫ್ ಕ್ಷೇತ್ರಕ್ಕೆ ಉತ್ತಮ ಭವಿಷ್ಯ ರೂಪಿಸಲು ಕೈಜೋಡಿಸಬೇಕಾಗಿದೆ ಎಂದರು.
ಅದೇ ರೀತಿ ಬಿಜಿಎಂಎಲ್ ಕಾರ್ಮಿಕರಿಗೆ ಸಿಗಬೇಕಾಗ ಶೇ.100 ವಿಆರ್‌ಎಲ್ ಬಡ್ಡಿ ಹಣ, ಮನೆಗಳು ಸ್ವಂತವಾಗಿಸಲು ಮತ್ತು ಕಾರ್ಮಿಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಕೆಲಸ ಸಿಗಲು ಕಾರ್ಮಿಕ ಸಂಘಗಳು ಬೇರೆ ಬೇರೆ ಸಂಘಗಳು ಮಾಡಿಕೊಳ್ಳುವುದನ್ನು ಬಿಟ್ಟು ಒಂದಾಗಬೇಕಿದೆ ಕಿವಿಮಾತು ಹೇಳಿದರು.
ಒಮ್ಮತದ ಹೋರಾಟಕ್ಕೆ ಸಜ್ಜಾಗಿ: ಚಿನ್ನದ ಗಣಿಯನ್ನು ಮುಚ್ಚಿ 13 ವರ್ಷಗಳು ಕಳೆದಿದೆ ಇನ್ನಾದರೂ ಕಾರ್ಮಿಕರ ಮತ್ತು ಕೆಜಿಎಫ್ ಚರಿತ್ರೆ ಬದಗಲಾಯಿಸಲು ಗುಂಪುಗಾರಿಕೆಯನ್ನು ಬಿಟ್ಟು ಪಕ್ಷ ಭೇದ ಭಾವವಿಲ್ಲದೆ ಎಲ್ಲರೂ ಹೋರಾಟ ನಡೆಸಬೇಕು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್‌ನ ಮುಂದಿನ ತೀರ್ಮಾನದ ನಂತರ ಗ್ಲೋಬಲ್ ಟೆಂಡರ್ ಕರೆಯುವುದಾದರೆ, ಕಾರ್ಮಿಕ ಸಂಘಗಳು ಮತ್ತು ಸೊಸೈಟಿಗಳು ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಎಲ್ಲಾ ರೀತಿಯ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಕಾರ್ಮಿಕರಿಗೆ ಮತ್ತು ಕುಟುಂಬ ವರ್ಗದವರಿಗೆ ತೊಂದರೆಯಾಗುವ ಸಾಧ್ಯತೆಗಳಿದ್ದು ತಮಗೆ ಬರಬೇಕಾದ ಬಡ್ಡಿ ಹಣ, ಮನೆ, ಮತ್ತು ಕೆಲಸವನ್ನು ಪಡೆಯಲು ಹೋರಾಟ ನಡೆಸಬೇಕಾಗುತ್ತದೆ ಎಂದರು.
ಕಾರ್ಮಿಕ ಒಕ್ಕೂಟ ಸಂಘದ ಅಧ್ಯಕ್ಷ ಯಶ್ವಂತ್‌ರಾಜ್, ಕಾರ್ಯದರ್ಶಿ ಗುಣಶೇಖರ್ ಸೇರಿದಂತೆ  ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement