ತಾಪಂ ಅಧ್ಯಕ್ಷ ಕೆ.ಚಂದ್ರಪ್ಪ ರಾಜಿನಾಮೆ
ಮಾಲೂರು: ಇಲ್ಲಿನ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಚಂದ್ರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಸೂಚನೆ ಮೇರೆಗೆ ಈ ಹಿಂದೆ ಆಗಿದ್ದ ಒಪ್ಪಂದದಂತೆ ಕೋಲಾರ ಜಿಲ್ಲಾಧಿಕಾರಿಗೆ ಸೋಮವಾರದಂದು ರಾಜಿನಾಮೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ನಿರ್ದೇಶನದಂತೆ ರಾಜಿನಾಮೆ ಸಲ್ಲಿಸಿದ್ದು, ಇಲ್ಲಿಯ ವರೆಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ವಿ.ಲೋಕೇಶ್, ಮಾಜಿ ಅಧ್ಯಕ್ಷ ಗೋಪಾಲ್ಗೌಡ, ಕೃಷ್ಣಪ್ಪ, ಸದಸ್ಯರಾದ ಆನಂದ್, ಪುಟ್ಟಸ್ವಾಮಿ,ವೆಂಕಟೇಶ್ಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಾಮಾನ್ಯರಿಗೆ ಮೀಸಲಾಗಿದ್ದ 20 ತಿಂಗಳಾವಧಿಯಲ್ಲಿ 10 ತಿಂಗಳು ಅಧ್ಯಕ್ಷ ಗಾದಿ ಅಲಂಕರಿಸಿದ್ದ ಕೆ.ಚಂದ್ರಪ್ಪ ನೀಡಿದ ರಾಜಿನಾಮೆಯಿಂತ ತೆರವಾಗಿರುವ ಅಧ್ಯಕ್ಷ ಗಾದಿಗೆ ಸದಸ್ಯರಾದ ಪುಟ್ಟಸ್ವಾಮಿ, ಲೋಕೇಶ್ ಹಾಗೂ ಆಶಾ ರಾಜಪ್ಪ ನಡುವೆ ಫೈಪೋಟಿ ಇದೆ. ಈ ನಿಟ್ಟಿನಲ್ಲಿ ತಾಪಂನಲ್ಲಿ ಬಹುಮತ ಹೊಂದಿರುವ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಸೂಚನೆ ಮೇಲೆ ನಿಂತಿದೆ.