ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶ್ರೀನಿವಾಸ ಸಾಗರದ ವೆಂಕಟೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಭೂಮಿಪೂಜೆ

Mainashree
Updated On : 9 Jul 2013, 12:11 pm

ಚಿಕ್ಕಬಳ್ಳಾಪುರ: ಸುಮಾರು 800 ವರ್ಷಗಳ ಹಿಂದೆ ಪಲ್ಲವರಿಂದ ನಿರ್ಮಾಣಗೊಂಡ ಶ್ರೀನಿವಾಸ ಸಾಗರದ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಜೀರ್ಣೋದ್ಧಾರ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಇಲ್ಲಿನ  ದೇವಾಲಯ ಟ್ರಸ್ಟ್ ವತಿಯಿಂದ ಸುಮಾರು ರು. 60 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶಾಸಕ ಡಾ.ಕೆ.ಸುಧಾಕರ್ ಮತ್ತಿತರರು ಸೋಮವಾರ ಭೂಮಿಪೂಜೆ ನೆರವೇರಿಸಿದರು.
4 ವರ್ಷಗಳಿಂದ ಕಾಮಗಾರಿ: ಶ್ರೀಕ್ಷೇತ್ರ ಶ್ರೀನಿವಾಸ ಸಾಗರದ ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಕಳೆದ 4 ವರ್ಷಗಳಿಂದ ನಡೆಯುತ್ತಿದ್ದು, 30 ಅಡಿ ಎತ್ತರದ ಏಕ ಶಿಲೆಯಿಂದ ಮಾಡಿರುವ ಧ್ವಜ ಸ್ತಂಭವನ್ನು ಶುಕ್ರವಾರ ಸ್ಥಾಪನೆ ಮಾಡಲಾಯಿತು.
ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ, ಸಂಚಾಲಕ ಎಂ.ಜಯರಾಮ್, ಸದಸ್ಯ ನಾಗರಾಜ್, ಲಕ್ಷ್ಮೀನರಸಪ್ಪ, ವಿಜಯ್‌ರೆಡ್ಡಿ  
ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸಿ ಕ್ಷೇತ್ರವಾಗಿ:  ಶ್ರೀನಿವಾಸ ಸಾಗರವನ್ನು ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ವಿವಿಧ ಇಲಾಖೆ ಸಹಯೋಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆಗಸ್ಟ್ ಮೊದಲನೇ ವಾರದಲ್ಲಿ ದೇವಾಲಯ ಕುಂಭಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement