ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ನೌಕರರ ಸಂಘದ ಚುನಾವಣೆ ಬಂಗಾರಪೇಟೆಯಲ್ಲಿ ಬಾಡೂಟ ಸುಗ್ಗಿ

Mainashree
Updated On : 9 Jul 2013, 12:11 pm

ಬಂಗಾರಪೇಟೆ: ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಗೆ ತಾಲೂಕಿನಲ್ಲಿ ಎಲ್ಲಾ ನೌಕರರು ಸದ್ದಿಲ್ಲದೆ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ತಾಲೂಕಿನಲ್ಲಿ ನೌಕರರನ್ನು ಸೆಳೆಯಲು ಬಾಡೂಟ ಬಲು ಜೋರಾಗಿ ನಡೆಯುತ್ತಿದೆ.
ಇದೇ ತಿಂಗಳು 22ರಂದು ನಡೆಯಲಿರುವ ತಾಲೂಕು ನೌಕರರ ಸಂಘದ ಅಧ್ಯಕ್ಷರ ಚುನಾವಣೆಗೆ ಎರಡು ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಚಂದ್ರಶೇಖರಗೌಡ ಈ ಬಾರಿ ಹ್ಯಾಟ್ರಿಕ್ ಸಾಧಿಸಲು ಯತ್ನಿಸಿದ್ದರೆ. ಇವರ ಹ್ಯಾಟ್ರಿಕ್ ಗೆಲವಿಗೆ ಭಂಗ ತರಲು ಮತ್ತೊಂದು ಗುಂಪು ಸದ್ದಿಲ್ಲದೆ ನಾಮಪತ್ರಗಳ ಸಲ್ಲಿಕೆಗೂ ಮುನ್ನವೇ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ.
ನೌಕರ ಸಂಘದ ತಾಲೂಕು ಅಧ್ಯಕ್ಷ ಗಿರಿಗೆ ಪ್ರಾಥಮಿಕ ಶಿಕ್ಷಕರ ವಲಯದಿಂದ ಸಿ.ಚಂದ್ರಶೇಖರಗೌಡ ಸ್ಪರ್ಧಿಸಲು ಮುಂದಾಗಿರುವುದರಿಂದ ಬೇರೆ ಇಲಾಖೆಯವರು ಅವರ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ.
11ರಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದ್ದು 15 ಕೊನೆ ದಿನವಾಗಿದ್ದು 22ರಂದು ಬೆಳಗ್ಗೆ 11ರಿಂದ ಸಂಜೆ 4.30ರವರೆಗೂ ಮತದಾನ ನಡೆಯಲಿದೆ.ಅಂದೇ ಮತ ಎಣಿಕೆ ನಡೆದು ಫಲಿತಾಂಶ ಅಂದೇ ಹೊರ ಬರಲಿದೆ.
ಶಿಕ್ಷಕರ ವಲಯದಿಂದ ಚಂದ್ರಶೇಖರಗೌಡರು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯುವುದರಿಂದ ಒಂದು ಗುಂಪು ಚಂದ್ರಶೇಖರಗೌಡರನ್ನು ಸೋಲಿಸಬೇಕೆಂದು ಶಿಕ್ಷಕರಲ್ಲಿನ ಒಗ್ಗಟ್ಟು ಚದುರಿಸಲು ಮುಂದಾಗಿದ್ದಾರೆ.  ಈ ನಿಟ್ಟಿನಲ್ಲಿ ಚುನಾವಣೆಗೂ ಮುನ್ನವೇ ಗೌಡರ ವಿರೋಧಿ ಬಣ ಶಿಕ್ಷಕರನ್ನು ಒಂದು ಕಡೆ ಸೇರಿಸಿಕೊಂಡು ಗುಂಡು ತುಂಡಿನ ಪಾರ್ಟಿಗಳನ್ನು ನಡೆಸುತ್ತಿದ್ದಾರೆ.
ಮುಂದೂಡಲಾಗಿತ್ತು: ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ.28ಕ್ಕೆ ಕೊನೆಕೊಂಡಿದ್ದ ನೌಕರರ ಸಂಘದ ಪದಾಧಿಕಾರಿಗಳ ಅವಧಿಯನ್ನು ಮೂರು ತಿಂಗಳು ಮುಂದೂಡಲಾಗಿತ್ತು. ಶಿಕ್ಷಕರ ವರ್ಗಾವಣೆ ಸಮಯದಲ್ಲಿ ಚುನಾವಣೆ ಬಂದಿರುವುದರಿಂದ ಯಾರಿಗೂ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಎದುರಿಸಬೇಕಿದೆ. ಶಿಕ್ಷಕರ ಒಂದು ಗುಂಪು ಶಾಲೆಗಳಿಗೆ ಹೋಗದೆ ಶಿಕ್ಷಕರಿಗೆ ಬಾಡೂಟದ ಪಾರ್ಟಿಗಳಲ್ಲಿ ನಿರತವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗಿದೆ ಎಂದು ಪೋಷಕರು ದೂರುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement