ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 9 Jul 2013, 12:12 pm

ಸಭಾ ಪಾಲನಾ ಸಮಿತಿಗೆ ಆಯ್ಕೆ
ಚಿಕ್ಕಬಳ್ಳಾಪುರ:  ನಗರದ ಸಿಎಸ್‌ಐ ಕ್ರೈಸ್ಟ್ ಚರ್ಚ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ 13 ಸದಸ್ಯ ಬಲದ ಸಭಾ ಪಾಲನಾ ಸಮಿತಿಗೆ ಸಿಎಸ್‌ಐ ಕ್ರೈಸ್ಟ್ ಚರ್ಚ್‌ನ ರೆವರೆಂಡ್ ಶೈಲಶ್ರೀ ಸುರೇಶ್ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚಿಕ್ಕಬಳ್ಳಾಪುರದ ಸಿಎಸ್‌ಐ ಕ್ರೈಸ್ಟ್ ಚರ್ಚ್‌ನ ಅಧ್ಯಕ್ಷರಾಗಿ ರೆವರೆಂಡ್ ಶೈಲಶ್ರೀ ಸುರೇಶ್, ಕಾರ್ಯದರ್ಶಿಗಳಾಗಿ ಎಸ್.ರವಿಕುಮಾರ್, ಖಜಾಂಚಿಯಾಗಿ ಡಿ.ಅರುಣಕುಮಾರ್, ಕಾರ್ಯಕ್ರಮ ಆಯೋಜಕರಾಗಿ ಆರ್.ಹೆನ್ರಿ ಪ್ರಸನ್ನಕುಮಾರ್, ಅಧೀಕ್ಷಕರಾಗಿ ಜೆ.ಜಯಕುಮಾರ್, ಭಜನಾ ಕಾರ್ಯದರ್ಶಿಯಾಗಿ ಡಿ.ಮೋಹನ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿ ಸದಸ್ಯರನ್ನಾಗಿ ವಿ.ದಾಸ್, ಮೇರಿ ಜಾಕೋಬ್, ವಿದ್ಯಾ ಸಾಗರ್, ತುಮಕೂರು ವಲಯ ಸದಸ್ಯರನ್ನಾಗಿ ಹರ್ಷಿತಾ ಎಡ್ವಿನ್, ಸ್ಟೀವನ್ ರೂಬಿನ್, ಸಾಜೆಂಟ್ ಸನತ್‌ಕುಮಾರ್, ಆಲಯದ ಮೇಲ್ವಿಚಾರಕರಾಗಿ ಜೆ.ಕಿರಣ ವಿಕ್ಟರ್, ಸಿಎಸ್‌ಐ ಆಸ್ಪತ್ರೆ ಸಮಿತಿ ಸದಸ್ಯರಾಗಿ ಸಾರ್ಜೆಂಟ್ ಸನತ್‌ಕುಮಾರ್, ಮಹಿಳಾ ಅನ್ಯೋನ್ಯಕೂಟದ ಸದಸ್ಯರನ್ನಾಗಿ ಶಶಿಕಲಾ ಸೈಮನ್, ಎಸ್.ವೀಣಾದತ್ ಹಾಗೂ ಯುವ ಅನ್ಯೋನ್ಯಕೂಟದ ಸದಸ್ಯರನ್ನಾಗಿ ಸ್ಟೀವನ್ ಇಮಾನ್ಯುಯಲ್, ಸ್ಟೀವನ್ ರೂಬಿನ್, ವಿದ್ಯಾ ಸಾಗರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಂಗಡಿ ತೆರವಿಗೆ ಒತ್ತಾಯ
ಕೋಲಾರ: ನಗರದ ಸರ್ಕಾರಿ ಬಾಲಕರ ಕಾಲೇಜು ಕಾಂಪೌಂಡ್ ಪಕ್ಕ ಹಾಗೂ ಸರ್ವಜ್ಞ ಪಾರ್ಕ್‌ಗೆ ಹೊಂದಿಕೊಂಡಂತೆ ತಲೆಯತ್ತಿರುವ ಅನಧಿಕೃತ ಪೆಟ್ಟಿ ಅಂಗಡಿಗಳನ್ನು ಕೂಡಲೇ ತೆರುವುಗೊಳಿಸಬೇಕೆಂದು ನಾಗರಿಕರು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.  ವಾಯು ವಿಹಾರಕ್ಕಾಗಿ ಬರುತ್ತಿದ್ದ ಹಿರಿಯ ನಾಗರಿಕರು ಅಂಗಡಿಗಳು ತಲೆ ಎತ್ತಿರುವುದರಿಂದ ಪಾರ್ಕ್‌ಗೆ ಬರದಂತಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ  ನಗರಸಭೆ ರಾಜಕೀಯ ಒತ್ತಡಕ್ಕೆ  ಮಣಿಯದೆ ನಗರದ ಸೌಂದರ್ಯಕ್ಕೆ ಅಡ್ಡಿಯಾಗಿರುವ ಅಂಗಡಿಗಳನ್ನು ತೆರುವುಗೊಳಿಸಿ ಅಂಗಡಿಗಳ ಮಾಲೀಕರಿಗೆ ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಹಿರಿಯ ನಾಗರಿಕರಾದ ಜಿ.ಗಂಗಾಧರ್, ಕೆ.ಆರ್.ಶೇಖರ್, ಸುಮಂತ್, ಸಾಭಿಯಾ ಕೌಸರ್, ಕಾಮರ್ ತಾಜ್,ಅರುಣ್‌ಕುಮಾರ್,ಶ್ರೀನಿವಾಸ್, ಮಣಿಕಂಠ, ಕೆ.ಎಸ್.ಲೋಹಿತ್, ವೆಂಕಟೇಶ್ ಮತ್ತಿತರರು ಆಗ್ರಹಿಸಿದ್ದಾರೆ.
ಎಸ್‌ಬಿಎಂ ಶ್ರೀಕಾಂತ್ ಮುಂದುವರಿಕೆಗೆ ಆಗ್ರಹ
ಪಾವಗಡ: ಬ್ಯಾಂಕ್ ನಿಯಮನುಸಾರ ಸಾಲ ಮರುಪಾವತಿ ಸೇರಿದಂತೆ ಗಡಿ ಭಾಗದ ರೈತರ ಕಷ್ಟ ಸುಖಕ್ಕೆ ಸ್ವಂದಿಸಿ ಕೆಲಸ ಮಾಡುವ ನಿಷ್ಠಾವಂತ ಅಧಿಕಾರಿ ಸ್ಟೇಟ್ ಬ್ಯಾಂಕ್ ಅಫ್ ಮೈಸೂರ್‌ನ ವ್ಯವಸ್ಥಾಪಕ ಶ್ರೀಕಾಂತ್ ಅವರನ್ನು ಇಲ್ಲಿಯೆ ಮುಂದುವರಿಸುವಂತೆ ಕೋಟಗುಡ್ಡ ವ್ಯಾಪ್ತಿಯ ನೂರಾರು ರೈತರು ಒತ್ತಾಯಿಸಿ ಮನವಿ ಮಾಡಿದ್ದಾರೆ. ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತರ ಪರವಾಗಿ ಮಾತನಾಡಿದ ಜಿಪಂ ಸದಸ್ಯೆ ರೇಖಾ ಅಂಜನೇಯಲು ಕೋಟಗುಡ್ಡ ಗ್ರಾಮದ ಸ್ಟೇಟ್ ಬ್ಯಾಂಕ್ ಅಫ್ ಮೈಸೂರಿನ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ಅವರು ಉತ್ತಮ ಅಧಿಕಾರಿ. ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ವಂದಿಸಿ ಕೆಲಸ ಮಾಡುತ್ತಿದ್ದಾರೆ. ಶ್ರೀಕಾಂತ್ ಅವರ ಸೇವೆ ನಮ್ಮ ಗಡಿ ಭಾಗಕ್ಕೆ ಅವಶ್ಯಕತೆ ಇದೆ ಎಂದರು. ಮುಖಂಡ ಬೂದಿಬೆಟ್ಟ ನರೇಂದ್ರರೆಡ್ಡಿ ಮಾತನಾಡಿ ಶ್ರೀಕಾಂತ್ ಅವರ ಸೇವೆ ಕುರಿತು ಈಗಾಗಲೇ ಸಂಬಂಧಪಟ್ಟ ಹೆಚ್ಚುವರಿ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಶ್ರೀಕಾಂತ್ ವ್ಯವಸ್ಥಾಪಕರಾಗಿ ಬ್ಯಾಂಕ್‌ಗೆ ಆಗಮಿಸಿದ ಸ್ವಲ್ಪ ದಿನಗಳಲ್ಲಿಯೇ ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದ ಅವರು ಅರ್ಹ ಫಲಾನುಭವಿಗಳಿಗೆ ಅರ್ಥಿಕ ಪ್ರಗತಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಉತ್ತಮ ಅಧಿಕಾರಿಯನ್ನು ವರ್ಗಾಯಿಸದೇ ಇಲ್ಲಿಯೆ ಮುಂದುವರಿಸಿ ಪ್ರಗತಿಗೆ ಸಹಕರಿಸಿ ಎಂದು ಅಧಿಕಾರಿಗಳಲ್ಲಿ ಅವರು ಮನವಿ ಮಾಡಿದರು. ಮುಖಂಡರಾದ ಸಣ್ಣಾರೆಡ್ಡಿ, ಸಿಂಗರೆಡ್ಡಿಹಳ್ಳಿ, ಶ್ರೀನಿವಾಸ್‌ರೆಡ್ಡಿ ಮುಂತಾದವರು ಮಾತನಾಡಿದರು.
ಇಂದು ತಿಪಟೂರಿಗೆ ದೇವೇಗೌಡ ಭೇಟಿ
ತಿಪಟೂರು: ತಾಲೂಕಿನಲ್ಲಿ ಬರಗಾಲದಿಂದ ಸಾವಿರಾರು ತೆಂಗಿನ ಮರಗಳು ಒಣಗಿ ಹೋಗಿದ್ದು ತೆಂಗು ಬೆಳೆಗಾರರಿಗೆ, ಸಂಕಷ್ಟಕ್ಕೀಡಾಗಿರುವ ರೈತರಿಗೆ ಸ್ಪಂದಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಒತ್ತಾಯಿಸುವ ಸಲುವಾಗಿ ಮಾಜಿ ಪ್ರಧಾನಿ  ಎಚ್.ಡಿ. ದೇವೇಗೌಡರು ಮಂಗಳವಾರ ಮಧ್ಯಾಹ್ನ ತಾಲೂಕಿಗೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಗೌಡರು ತೋಟಗಳಿಗೆ ಖುದ್ದು ಬೇಟಿ ನೀಡಿ ಪರಿಶಿಲಿಸಲಿದ್ದಾರೆಂದು ಜೆಡಿಎಸ್ ತಿಳಿಸಿದೆ.
ಇಂದು ಚಿತ್ರಕಲಾ ಕೃತಿಗಳ ಪ್ರದರ್ಶನ
ತುಮಕೂರು: ಇಲ್ಲಿನ ರವೀಂದ್ರ ಕಲಾನಿಕೇತನದಲ್ಲಿ 9ರಂದು ಬೆಳಿಗ್ಗೆ 10.30ಕ್ಕೆ 2013-14ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ಹಾಗೂ ಚಿತ್ರಕಲಾ ಕೃತಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಸರ್ವೋದಯ ಕಾರ್ಯಕರ್ತ ಹೆಚ್.ಎಸ್. ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಂ.ಎನ್. ವೆಂಕಟಾಚಲಯ್ಯ, ಎಂ. ಬಸವಯ್ಯ, ಡಿ.ಹೆಚ್. ಗೌರಮ್ಮ ಆಗಮಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement