ಅಹಂನಿಂದ ದಾರಿ ತಪ್ಪುವ ಮಾನವ: ಭಗವಾನ್ದಾಸ್
ಗೌರಿಬಿದನೂರು: ನಿರಂತರ ಭಕ್ತಿ ಧ್ಯಾನದಿಂದ ಮನುಷ್ಯ ಮಹಾತ್ಮನಾಗಿ ಲೋಕ ಕಲ್ಯಾಣಕ್ಕೆ ಅರ್ಪಿತನಾಗುತ್ತಾನೆ ಎಂದು ಶ್ರೀ ಭಗವಾನ್ ದಾಸರು ತಿಳಿಸಿದರು. ಮಂಚೇನಹಳ್ಳಿ ಹೋಬಳಿಯಲ್ಲಿ ಶ್ರೀ ಭಗವಾನ್ ದಾಸರ ಆಶ್ರಮ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಠಯೋಗಿ ಸದ್ಗುರು ವೀರಾನಂದ ಸ್ವಾಮೀಜಿಯವರ ಮಹೋತ್ಸವದಲ್ಲಿ ಮಾತನಾಡಿದ ಅವರು, ಹಿಂಸೆ, ಸ್ವಾರ್ಥ, ನಾನು ಎನ್ನುವ ಅಹಂನಿಂದ ಮಾನವ ದಾರಿ ತಪ್ಪಿ ಮಹತ್ವವನ್ನು ಹಾಳು ಮಾಡುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.