ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬತ್ತೇಗೌಡನೂರ ಕೊಳವೆಬಾವಿಯಲ್ಲಿ ಸಮೃದ್ಧ ಸಿಹಿ ನೀರು ಬಂತು...

Mainashree
Updated On : 10 Jul 2013, 12:02 pm

ಬಂಗಾರಪೇಟೆ: ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಬರಗಾಲ ಆವರಿಸಿರುವುದರಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ ಸಾವಿರ ಅಡಿಗಳಷ್ಟು ಕೊಳವೆ ಬಾವಿ ಕೊರೆಸಿದರೂ ಹನಿ ನೀರು ಮಾತ್ರ ಸಿಗುತ್ತಿಲ್ಲ ಇಂತಹದರಲ್ಲಿ ತಾಲೂಕಿನ ಗಡಿ ಭಾಗದಲ್ಲಿರುವ ಕುಗ್ರಾಮದಲ್ಲಿ ಹಳೇ ಕಾಲದ ಕೈಪಂಪ್ ಬೋರ್‌ನಲ್ಲಿ ಸಮೃದ್ಧವಾಗಿ ನೀರಿರುವುದು ಗ್ರಾಮಸ್ಥರನ್ನು ಪುಳಕಿತಗೊಳಿಸಿದೆ.
ತಾಲೂಕಿನ ಬತ್ತೇಗೌಡನೂರು ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೋದಾಗ ಅಂತರ್ಜಲ ಕುಸಿತದಿಂದಾಗಿ ಹಿಂದಿನ ಕಾಲದಲ್ಲಿ ಅಳವಡಿಸಿರುವ ಕೈ ಪಂಪುಗಳು ಆಧುನಿಕ ಯುಗದಲ್ಲಿ ಮಾಯವಾಗಿದ್ದು ಎಲ್ಲಾ ಕಡೆ ಮುಚ್ಚಲಾಗಿದೆ. ಆದರೆ ಬತ್ತೇಗೌಡನೂರು ಗ್ರಾಮದಲ್ಲಿ ಇಂದಿಗೂ ಗ್ರಾಮಸ್ಥರಿಗೆ ಈ ಕೈ ಪಂಪುನಿಂದಲೇ ಕುಡಿಯುವ ನೀರಿಗೆ ಆಶ್ರಯವಾಗಿರುವುದು ಎಲ್ಲರನ್ನು ಆಶ್ಚರ್ಯಗೊಳಿಸಿದೆ. ನೀರು ಸಹ ತುಂಬಾ ಸಿಹಿಯಾಗಿದೆ. ಸುಮಾರು ದಶಕಗಳಿಂದಲೂ ಗ್ರಾಮಸ್ಥರು ಬೇರೆ ಕೊಳವೆ ಬಾವಿಯನ್ನು ಆಶ್ರಯಿಸದೆ ಈ ಕೈ ಪಂಪು ಕೊಳವೆ ಬಾವಿಯಿಂದ ಪಂಪ್ ಮಾಡಿಕೊಂಡು ನೀರು ಕುಡಿಯುತ್ತಿದ್ದಾರೆ ಈ ಕೈ ಪಂಪು ಕೊಳವೆಯಲ್ಲಿ ಕೇವಲ 100ಅಡಿಗಳಲ್ಲೇ ಸಮೃದ್ಧವಾಗಿ ನೀರು ಇದೆ ಎಂದು ಗ್ರಾಮಸ್ಥರು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಗಮನಕ್ಕೆ ತಂದರು.
ಗ್ರಾಮಸ್ಥರ ಮಾತಿನಿಂದ ಆಶ್ಚರ್ಯಗೊಂಡು ಖುದ್ದಾಗಿ ಶಾಸಕರೇ ಕೈಯಿಂದ ಪಂಪು ಮಾಡಿ ನೀರು ಸೇವಿಸಿ ದಾಹವನ್ನು ತೀರಿಸಿಕೊಂಡರು. ಇಂದಿನ ಕಾಲದಲ್ಲೂ ಇಂತಹ ಕೈ ಪಂಪುಗಳಿರುವುದು ಅಪರೂಪ ಅದಲ್ಲೂ ಇಲ್ಲಿ ನೂರು ಅಡಿಗಳಲ್ಲೇ ನೀರು ಲಭ್ಯವಿರುವುದು ಆಶ್ಚರ್ಯ ಉಂಟು ಮಾಡಿದ್ದು, ಕೈ ಪಂಪು ಸುತ್ತಲೂ ಶುಚಿತ್ವ ಇಲ್ಲದೆ ಅನೈರ್ಮಲ್ಯದಿಂದ ಕೂಡಿದ್ದನ್ನು ಕಂಡು ಶಾಸಕರು ಅಸಮಾಧಾನಗೊಂಡು ಕೂಡಲೆ ಇದರ ಸುತ್ತಲೂ ಶುಚಿತ್ವ ಕಾಪಾ ಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement