ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಜಿಎಫ್ ಬಾಲಕ ನೀರುಪಾಲು

Rashmi Kasaragodu
Updated On : 11 Jul 2013, 1:14 am

ಕೆಜಿಎಫ್:  ಕೆರೆಯಲ್ಲಿ ಈಜಲು ಹೋದ ಬಾಲಕನು ನೀರು ಪಾಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೌರಿಲಾಲ್‌ಪೇಟೆ ನಿವಾಸಿ ಸಮೀಹಾ ಎಂಬವರ ಪುತ್ರ ಸಾಕೀಬ್ (12) ಮೃತಪಟ್ಟವನು. ನಗರದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಸಾಕೀಬ್, ಎರಡು ದಿನಗಳ ಹಿಂದೆ ಮನೆ ಬಿಟ್ಟು ಹೋದವನು ಹಿಂತಿರುಗಿರಲಿಲ್ಲ. ತಾಯಿ ಸಮೀಹಾ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬುಧವಾರ ನಗರದ ಪಾರಂಡಹಳ್ಳಿ ಗ್ರಾಮದ ಕೆರೆಯಲ್ಲಿ ಬಾಲಕನೊಬ್ಬ ಮೃತಪಟ್ಟಿರುವುದಾಗಿ ತಿಳಿದು ಹೋಗಿ ನೋಡಿದಾಗ, ಸಾಕೀಬ್ ಶವ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement