ದಲಿತರ ಅಭಿವೃದ್ಧಿಗೆ ಶೇ.25 ಹಣ ಮೀಸಲಿಗೆ ಒತ್ತಾಯ: ಪ್ರತಿಭಟನೆ
ಕೋಲಾರ: ರಾಜ್ಯದಲ್ಲಿನ ದಲಿತರ ಏಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜು.12 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಶೇ. 25 ರಷ್ಟು ಹಣವನ್ನು ಮೀಸಲಿಟ್ಟು ಸಕಾಲಕ್ಕೆ ಹಣ ಸದುಪಯೋಗವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲಿ ಏಕರೂಪ ಮತ್ತು ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು, ಸ್ಥಳೀಯ ಸಂಸ್ಥೆಗಳಲ್ಲಿ ಶುಚಿತ್ವಕ್ಕಾಗಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಬೇಕು, ಸಫಾಯಿ ಕರ್ಮಚಾರಿ ಕಾರ್ಮಿಕರಿಗೆ ತಕ್ಷಣದಿಂದಲೇ ಕನಿಷ್ಠ ಕೂಲಿ ನೀತಿ ಜಾರಿ ಮಾಡಬೇಕು ಇವರ ಮಕ್ಕಳಿಗೆ ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಉಚಿತವಾಗಿ ವಿದ್ಯಾಭ್ಯಾಸ ನೀಡಲು ಕಾರ್ಯಕ್ರಮ ರೂಪಿಸಬೇಕು, ದಲಿತರಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕದಸಂಸದ ಮುಖಂಡರಾದ ವಿ. ನಾರಾಯಣಸ್ವಾಮಿ, ಡಿ. ಚಿಕ್ಕಣ್ಣ, ಆರ್. ಕುಮಾರ್, ಎನ್.ನಟರಾಜು, ಸಿದ್ಧಘಟ್ಟ ಶ್ರೀನಿವಾಸ, ಮಗದುಮ್ ಷರೀಷ್, ಹುಲ್ಕೂರ್ ವೆಂಕಟೇಶ್, ಕೆ.ಆರ್. ಮುನಿಯಪ್ಪ, ಗೌನಿಪಲ್ಲಿ ವೆಂಕಟರವಣಪ್ಪ, ಚನ್ನಕೃಷ್ಣ, ಚಂದ್ರಶೇಖರ್, ಮದನಹಳ್ಳಿ ಮುನಿರಾಜ ಹಾಗೂ ವಿವಿಧ ತಾಲೂಕಿನ ಸಂಚಾಲಕರು ಇದ್ದರು.