ನಿಧಿ ಶೋಧನೆಗೆ ಹೊರಟಿದ್ದ 6 ಜನರ ಸೆರೆ
ಗುಡಿಬಂಡೆ: ಪಟ್ಟಣ ಹೊರವಲಯದ ಕಣಿವೆ ಶನಿಮಹಾತ್ಮಸ್ವಾಮಿ ದೇವಸ್ಥಾನದ ಬಳಿಯಿದ್ದ ಗುಡ್ಡವೊಂದರಲ್ಲಿ ನಿಧಿ ಶೋಧನೆ ಮಾಡಲು ಬಂದ 6ಜನರನ್ನು ಬಂಧಿಸಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮಾವಸ್ಯೆಯ ಸೋಮವಾರ ಮುಂಜಾನೆ ಸುಮಾರು 3ಗಂಟೆ ವೇಳೆಯಲ್ಲಿ ಗುಡಿಬಂಡೆ-ಗೌರಿಬಿದನೂರು ಮಾರ್ಗದಲ್ಲಿ ಬರುವ ಕಣಿವೆ ಶನಿಮಾಹತ್ಮಸ್ವಾಮಿ ದೇವಾಲಯದ ಕಡೆಗೆ ವೇಗವಾಗಿ ಹೋಗುತ್ತಿದ್ದ ಆಟೋವನ್ನು ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಹಿಂಬಾಲಿಸಿ, ಚಾಲಕನನ್ನು ವಿಚಾರಿಸಿ ನಿಧಿ ಶೋಧನೆ ಮಾಡಲು ಬಂದಿರುವ ವಿಷಯ ತಿಳಿದು, ನಿಧಿ ಶೋಧನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಅಲ್ಲಿದ್ದ ಪೂಜಾ ಸಾಮಾಗ್ರಿಗಳನ್ನು ಹಾಗೂ ಇತರೆ ವಸ್ತುಗಳೊಂದಿಗೆ 5 ಜನರನ್ನು ಬಂಧಿಸಿದ್ದಾರೆ. ಆರೋಪಿಗಳಾದ ದೊಡ್ಡಬಳ್ಳಾಪುರದ ಬಷೀರ್ ಅಹ್ಮದ್, ಬೆಂಗಳೂರಿನ ಮೌಲಾ ಅಫಜಲ್, ಅಬ್ದುಲ್ ಖಾದರ್, ಜಾವೀದ್ ಅಹಮದ್, ಆಟೋ ಚಾಲಕ ಅಂಜದ್ ಖಾನ್ ಇವರ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿದ್ದಾರೆ.